ಮಾಯಾ ಕನ್ನಡಿ' ಟೀಸರ್ ಬಿಡುಗಡೆ

ಸೋಮವಾರ, ಜೂನ್ 17, 2019
28 °C

ಮಾಯಾ ಕನ್ನಡಿ' ಟೀಸರ್ ಬಿಡುಗಡೆ

Published:
Updated:
Prajavani

ಸಿಫೋರಿಯಾ ಪಿಕ್ಚರ್ಸ್‌ ಲಾಂಛನದಲ್ಲಿ ಸಪ್ನಾ ಪಾಟೀಲ್ ನಿರ್ಮಿಸಿರುವ `ಮಾಯಾ ಕನ್ನಡಿ’ ಚಿತ್ರದ ಟೀಸರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಈ ಚಿತ್ರದ ಹಾಡು ಮತ್ತು ವಿಡಿಯೊ ಹಕ್ಕುಗಳನ್ನು ಪಡೆದಿದೆ. ಒಂದು ನಿಮಿಷದ ಈ ಟೀಸರ್‌ನಲ್ಲಿ ನಟ ಕೆ.ಎಸ್.ಶ್ರೀಧರ್ ಅವರ ಒಂದು ಸಂಭಾಷಣೆ ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ.

ವಿನೋದ್ ಪೂಜಾರಿ ಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಎಸ್.ಎನ್ ಸಂಗೀತ ನೀದಿದ್ದಾರೆ. ಆನಂದ್ ರಾಜವಿಕ್ರಂ ಹಿನ್ನೆಲೆ ಸಂಗೀತ, ಮಣಿ ಕುಕಲ್ ನಾಯರ್ ಛಾಯಾಗ್ರಹಣ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕಿಂಗ್ ಆಫ್‌ ಹಾರ್ಟ್ಸ್‌ ಎಂಟರ್‍ಟೈನ್ಸ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ರಂಜಿತ್ ಬಜ್ಪೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಭು ಮುಂಡ್ಕೂರು, ಕೆ.ಎಸ್.ಶ್ರೀಧರ್, ಕಾಜಲ್ ಕುಂದರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ಅಶ್ವಿನಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ತಾರಾಬಳಗದಲ್ಲಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !