ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸೆ ಮತ್ತು ಜಡೆ ಅಂದ್ರೆ ಪ್ರೇಮಯುದ್ಧ!

Last Updated 17 ಮಾರ್ಚ್ 2019, 12:38 IST
ಅಕ್ಷರ ಗಾತ್ರ

‘ಮೀಸೆ’ ಪೌರುಷದ ಸಂಕೇತ. ‘ಜಡೆ’ ಹೆಣ್ತನದ ಸಂಕೇತ. ‘ಮೀಸೆ ಮತ್ತು ಜಡೆ’ ಅಂದರೆ ಜ್ಯೋತಿರಾವ್ ಮೋಹಿತ್ ಅವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಹೆಸರು!

ಹಿಂದೆ ‘ಸೋಡಾಬುಡ್ಡಿ’ ಎಂಬ ಸಿನಿಮಾ ನಿರ್ದೇಶಿಸಿದ್ದ ಮೋಹಿತ್ ಅವರು ಈಗ ಈ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಒಂದು ವರ್ಷ ಕೂತು ಇದರ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಚಿತ್ರದ ಒಂದು ದೃಶ್ಯವನ್ನು ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡುವುದು, ಅದಕ್ಕೆ ಸಿನಿಮಾ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಸಿನಿಮಾದ ತೂಕ ಕೂಡ ಹೆಚ್ಚುತ್ತದೆ ಎಂಬ ಲೆಕ್ಕಚಾರ ಅವರಲ್ಲಿ ಇದೆ.

‘ಮೀಸೆ ಮತ್ತು ಜಡೆ ಎನ್ನುವುದು ನಮ್ಮ ಒಂದು ಪ್ರಾಮಾಣಿಕ ಪ್ರಯತ್ನ. ಹುಡುಗ ಮತ್ತು ಹುಡುಗಿಯ ನಡುವಿನ ಕಥೆ ಇದು. ಇದನ್ನು ಸಹಜ ಹಾಸ್ಯದ ಸಿನಿಮಾ ಆಗಿಸಲು ಯತ್ನಿಸುತ್ತಿದ್ದೇವೆ’ ಎಂದರು ಮೋಹಿತ್.

ಈಗಿನ ಕಾಲದ ಹುಡುಗ, ಹುಡುಗಿಯರು ತಂತ್ರಜ್ಞಾನವನ್ನು ಬಳಸಿಕೊಳ್ಳುವಾಗ ಯಾವ ತಪ್ಪು ಮಾಡುತ್ತಾರೆ, ಅದರ ಪರಿಣಾಮ ಏನಾಗುತ್ತದೆ ಎಂಬುದು ಈ ಚಿತ್ರದ ಕಥೆಯ ಎಳೆ. ಚಿತ್ರದಲ್ಲಿ ಉತ್ಪ್ರೇಕ್ಷೆಗಳು ಇರುವುದಿಲ್ಲ ಎಂದು ಚಿತ್ರತಂಡ
ಹೇಳಿದೆ.

ಚಿತ್ರದ ನಾಯಕಿ ಮುಂಗೋಪಿ ಆಗಿರುತ್ತಾಳೆ. ನಾಲ್ಕು ಜನ ಹುಡುಗಿಯರು ಹಾಗೂ ನಾಲ್ಕು ಜನ ಹುಡುಗರು ಮುಖ್ಯ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ‘ಒಂದು ತಾಜಾ ಚಿತ್ರಕಥೆಯನ್ನು ವೀಕ್ಷಕರ ಮುಂದಿಡುವ ಭರವಸೆ ನೀಡುವೆ. ವಯಸ್ಸು ಮತ್ತು ಮನಸ್ಸಿನ ನಡುವೆ ನಡೆಯುವ ಪ್ರೇಮ ಯುದ್ಧ ಈ ಚಿತ್ರದಲ್ಲಿ ಇರಲಿದೆ’ ಎಂದರು ಮೋಹಿತ್.

ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಲಿದೆ. ಚಿತ್ರದ ನಿರ್ಮಾಣ ಆದಿತ್ಯ ಗಣೇಶ್ ಅವರದ್ದು. ಹೀರೊ ಆಗಿ ‍ಪ್ರತೀಕ್ ಶೆಟ್ಟಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT