ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಟೈಗ್ರೆಸ್’ ಎಂದೇ ಹೆಸರಾಗಿದ್ದ ಮೆಕ್ಸಿಕೊ ನಟಿ ಇರ್ಮಾ ಸೆರ್ರಾನೊ ನಿಧನ

Last Updated 2 ಮಾರ್ಚ್ 2023, 2:16 IST
ಅಕ್ಷರ ಗಾತ್ರ

ಮೆಕ್ಸಿಕೊ: ಮೆಕ್ಸಿಕೊದ ರಾಜಕಾರಣಿ ಕಮ್ ನಟಿ ಇರ್ಮಾ ಸೆರ್ರಾನೊ(89) ನಿಧನರಾಗಿದ್ದಾರೆ ಎಂದು ಮೆಕ್ರಿಕೊದ ಪರ್ಫಾರ್ಮೆನ್ಸ್ ಅಸೋಸಿಯೇಶನ್ ತಿಳಿಸಿದೆ.

1960ರ ದಶಕದಲ್ಲಿ ಮೆಕ್ಸಿಕೊದ ಸಾಂಪ್ರದಾಯಿಕ ರಾಂಚೇರಾ ಸಂಗೀತ ಮತ್ತು ನೃತ್ಯದ ಮೂಲಕ ಅವರು ಹೆಸರು ಗಳಿಸಿದ್ದರು.

ಮೆಕ್ಸಿಕೊದ ಅಂದಿನ ಅಧ್ಯಕ್ಷ ಗುಸ್ಟಾವೊ ಡಿಯಾಜ್ ಆರ್ಡಜ್ ಅವರ ಜೊತೆ ದೀರ್ಘ ಸಂಬಂಧವನ್ನು ಹೊಂದಿದ್ದರು. ಬಳಿಕ ಅವರನ್ನೇ ವಿವಾಹವಾಗಿದ್ದರು.

ಅತಿಯಾದ ಮೇಕಪ್ ಮತ್ತು ಉಡುಪಿನ ಮೂಲಕ ಹೆಸರಾಗಿದ್ದ ಅವರನ್ನು ‘ದಿ ಟೈಗ್ರೆಸ್’ಎಂದು ಕರೆಯಲಾಗುತ್ತಿತ್ತು. 1970ರ ದಶಕದಲ್ಲಿ ಹಲವು ಟಿಲಿವಿಜನ್ ಮತ್ತು ಕಡಿಮೆ ಬಜೆಟ್‌ನ ಚಿತ್ರಗಳಲ್ಲಿ ನಟಿಸಿದ್ದರು. ಮೆಕ್ಸಿಕೊದಲ್ಲಿ ‘ಟಿಯಾಟ್ರೊ ಫ್ರು ಫ್ರು’ ಎಂಬ ಚಿತ್ರಮಂದಿರವನ್ನು ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT