‘ಅವತಾರ್‌’ನಲ್ಲಿ ಮಿಷೆಲ್‌ ಅವತಾರ

ಶನಿವಾರ, ಮೇ 25, 2019
33 °C

‘ಅವತಾರ್‌’ನಲ್ಲಿ ಮಿಷೆಲ್‌ ಅವತಾರ

Published:
Updated:
Prajavani

ಆ್ಯಕ್ಷನ್‌ ಸಿನಿಮಾಗಳ ಮೂಲಕವೇ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ಮಲೇಷ್ಯಾ ಮೂಲದ ನಟಿ ಮಿಷೆಲ್‌ ಯೋ ಈಗ ಜೇಮ್ಸ್‌ ಕ್ಯಾಮರಾನ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಎಲ್ಲಾ ವಯೋಮಾನದ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಬ್ಲಾಕ್‌ಬ್ಲಸ್ಟರ್‌ ‘ಅವತಾರ್‌’ ಚಿತ್ರದ ಸರಣಿಯಲ್ಲಿ ಮಿಷೆಲ್‌ ಮಾನವ ವಿಜ್ಞಾನಿಯ ಪಾತ್ರ ಮಾಡಲಿರುವುದು ಖಚಿತವಾಗಿದೆ.

ಅಮೆರಿಕನ್‌ ಚಿತ್ರ ‘ಕ್ರೇಜಿ ರಿಚ್‌ ಏಷಿಯನ್ಸ್‌’ನಲ್ಲಿ ಆ್ಯಕ್ಷನ್‌ ಪಾತ್ರದಿಂದ ಮಿಷೆಲ್‌ ಹೆಚ್ಚು ಜನಪ್ರಿಯತೆ ಗಳಿಸಿದವರು.

ಅವತಾರ್‌ನ ಸರಣಿಯಲ್ಲಿ ಜೋಯ್‌ ಸಾಲ್ಡಾನಾ ಮತ್ತು ಸ್ಯಾಮ್‌ ವರ್ತ್‌ವಿಂಗ್ಟನ್‌ ಅವರೊಂದಿಗೆ ಮಿಷೆಲ್‌ ತಮ್ಮ ನಟನೆಯ ಚಳಕ ತೋರಿಸಲಿದ್ದಾರೆ. ಅವತಾರ್‌ನ ಐದರಿಂದ ಆರು ಸರಣಿಗಳು ಮುಂದಿನ ವರ್ಷಗಳಲ್ಲಿ ತೆರೆಗೆ ಬರಲಿವೆ ಎಂದು ಜೇಮ್ಸ್‌ ಕ್ಯಾಮರಾನ್‌ ಈ ಹಿಂದೆ ಪ್ರಕಟಿಸಿದ್ದರು. ಅಲ್ಲದೆ ಸರಣಿಗಳ ಶೀರ್ಷಿಕೆಗಳನ್ನೂ ಅಂತಿಮಗೊಳಿಸಿದ್ದರು.

ವಿಜ್ಞಾನಿ ಡಾ.ಕರೀನಾ ಮೋಖ್‌ ಪಾತ್ರಕ್ಕೆ ಮಿಷೆಲ್‌ ಜೀವ ತುಂಬಲಿದ್ದಾರೆ. ‘ಟೈಟಾನಿಕ್‌’ ಖ್ಯಾತಿಯ ಕೇಟ್‌ ವಿನ್ಸ್‌ಲೆಟ್‌, ಸಿಗಾರ್ನೆ ವೀವರ್‌, ಡೇವಿಡ್‌ ಥ್ಯೂವಿಸ್‌ ಮತ್ತು ಎಡಿ ಫಾಲ್ಕೊ ಕೂಡಾ ಎರಡನೇ ಸರಣಿಯಲ್ಲಿ ನಟಿಸಲಿದ್ದಾರೆ.

ಹಲವು ಬಾರಿ ಆಸ್ಕರ್‌ ಪ್ರಶಸ್ತಿ ಗಳಿಸಿರುವ ಮಿಷೆಲ್‌ ಅವರಿಗೆ ಈಗ 64ರ ಹರೆಯ. ಆದರೆ ಸಾಹಸ ಸನ್ನಿವೇಶಗಳನ್ನು ನಿರ್ವಹಿಸುವಾಗ ಷೋಡಶದ ಹುಡುಗರಷ್ಟು ಉತ್ಸಾಹದಿಂದ ಚಿಮ್ಮುತ್ತಾರೆ. ಅವತಾರ್‌ನ ಎರಡನೇ ಸರಣಿ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ತೆರೆಕಾಣಬೇಕು ಎಂಬುದು ಜೇಮ್ಸ್‌ ಕ್ಯಾಮರಾನ್‌ ಲೆಕ್ಕಾಚಾರ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !