ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಮಾಕ್ಟೆಲ್‌ ಜೋಡಿ ಮೆಹಂದಿ ಸಡಗರ: ಪ್ರೇಮಿಗಳ ದಿನಕ್ಕೆ ಲಿರಿಕಲ್‌ ವಿಡಿಯೊ

Last Updated 11 ಫೆಬ್ರುವರಿ 2021, 15:48 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ‘ಕ್ರಿಸ್ಮಿ’ ಜೋಡಿ ಅಂದರೆ, ‘ಲವ್‌ ಮಾಕ್ಟೆಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಇದೇ 14ರಂದು ಪ್ರೇಮಿಗಳ ದಿನದಂದೇ ಹಸೆಮಣೆಗೆ ಏರಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಜೋಡಿಯ ಮೆಹಂದಿ ಶಾಸ್ತ್ರವು ಸಂಭ್ರಮದಿಂದ ನಡೆದಿದೆ.

ಇದರ ಫೋಟೊಗಳನ್ನು ಮಿಲನಾ ನಾಗರಾಜ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್‌ ಮಾಡಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ. ಸ್ವತಃ ಕೃಷ್ಣ ಅವರೇ ಕೈಗೆ ಮೆಹಂದಿ ಹಾಕುತ್ತಿರುವ ಚಿತ್ರವನ್ನೂ ಅಪ್‌ಲೋಡ್‌ ಮಾಡಿರುವ ಮಿಲನಾ, ‘ಕ್ರಿಸ್ಮಿ ಸೆಲೆಬ್ರೇಷನ್‌’ ಎಂದು ಬರೆದಿದ್ದಾರೆ.

ಇನ್ನು ಮದುವೆಯ ದಿನವೇ, ಲವ್‌ ಮಾಕ್ಟೆಲ್‌–2 ಸಿನಿಮಾದ ಮೊದಲ ಲಿರಿಕಲ್‌ ಹಾಡು ‘ನಿನ್ನದೇನೆ ಜನುಮ’ವೂ ಬಿಡುಗಡೆಯಾಗಲಿದ್ದು, ಇದಕ್ಕಿಂತ ವಿಶೇಷ ದಿನ ಬೇರೊಂದಿಲ್ಲ ಎಂದು ಮಿಲನಾ ನಾಗರಾಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT