ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಿಮಿ' ಚಿತ್ರದ ಟ್ರೈಲರ್‌ ನೋಡಿ: ಬಾಡಿಗೆ ತಾಯಿಯಾದ ಕೃತಿ ಸನೊನ್

Last Updated 13 ಜುಲೈ 2021, 10:12 IST
ಅಕ್ಷರ ಗಾತ್ರ

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃತಿ ಸನೊನ್ ಅವರ'ಮಿಮಿ' ಸಿನಿಮಾದ ಟ್ರೈಲರ್‌ ಮಂಗಳವಾರ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 11 ಲಕ್ಷ ವೀಕ್ಷಣೆ ಪಡೆದಿದೆ.

ಈ ಚಿತ್ರದಲ್ಲಿಕೃತಿ ಸನೊನ್ ಬಾಡಿಗೆ ತಾಯಿಯಾಗಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ಅವರು 15 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದು ವಿಶೇಷ. ಮಿಮಿ ಚಿತ್ರ ಜುಲೈ 30ರಂದುನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನೆಮಾದಲ್ಲಿ ಮೊದಲ ಪ್ರದರ್ಶನ ಕಾಣಲಿದೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈಚಿತ್ರದಲ್ಲಿ ಕೃತಿ ಜತೆಗೆ ಪಂಕಜ್ ತ್ರಿಪಾಠಿ, ಸಾಯಿ ತಮಹಂಕರ್, ಸುಪ್ರಿಯಾ ತ್ರಿಪಾಠಿ ಮತ್ತು ಮನೋಜ್ ಪಹ್ವಾ ನಟಿಸಿದ್ದಾರೆ.

ಚಿತ್ರದಟ್ರೈಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ 30ರಂದು ತಪ್ಪದೇ ಸಿನಿಮಾ ನೋಡಿ ಎಂದು ಕೃತಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT