ಸ್ಟೈಲಿಸ್ಟ್‌ ಬೇಬಿ ಮಿಶಾ ಕಪೂರ್!

ಶನಿವಾರ, ಮೇ 25, 2019
28 °C

ಸ್ಟೈಲಿಸ್ಟ್‌ ಬೇಬಿ ಮಿಶಾ ಕಪೂರ್!

Published:
Updated:
Prajavani

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಮಗಳು ಮಿಶಾ ಕಪೂರ್ ಬಾಲಿವುಡ್‌ನ ಲೇಟೆಸ್ಟ್‌ ಸ್ಟೈಲಿಸ್ಟ್‌ ಬೇಬಿಯಾಗಿ ಸಖತ್ ಫೇಮಸ್ ಆಗಿದ್ದಾಳೆ. ಇದೇ ಆಗಸ್ಟ್‌ಗೆ ಮಿಶಾಗೆ ಮೂರು ವರ್ಷ ತುಂಬಲಿದೆ. ತನಗೆ ಬೇಕಾದ ಬಟ್ಟೆಯನ್ನು ತಾನೇ ಆರಿಸಿಕೊಂಡು ತೊಡುವ ಮಿಶಾ ಈಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳತೊಡಗಿದ್ದಾಳೆ.

ಇತ್ತೀಚೆಗೆ ಮಿಶಾ ಒಂದು ತೋಳಿರುವ ತಿಳಿ ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಪ್ಯಾಂಟ್ ತೊಟ್ಟು ಅದಕ್ಕೆ ಸೂಕ್ತವಾದ ನೀಲಿ–ಗುಲಾಬಿ ಬಣ್ಣದ ಗಮ್ ಬೂಟ್‌ ಹಾಕಿಕೊಂಡಿದ್ದಳಂತೆ. ಅದನ್ನು ಗಮನಿಸಿದ ಮೀರಾ, ತನ್ನ ಮಗಳು ತನ್ನ ಬಟ್ಟೆಯನ್ನು ತಾನೇ ಆಯ್ಕೆ ಮಾಡಿಕೊಳ್ಳುವಷ್ಟು ದೊಡ್ಡವಳಾದಳು ಅನ್ನುವ ಅರ್ಥ ಪೋಸ್ಟ್ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಮಗಳನ್ನು ಪ್ರೀತಿಯಿಂದ ‘ಮಿಸ್ಸಿ’ ಎಂದು ಕರೆಯುವ ಮೀರಾ–ಶಾಹಿದ್ ದಂಪತಿಗೆ ಈಚೆಗಷ್ಟೆ ಗಂಡು ಮಗುವಾಗಿದೆ. ಎರಡೂ ಮಕ್ಕಳ ಜತೆಗಿನ ಮುದ್ದಾದ ಫೋಟೊವನ್ನು ಈ ಜೋಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳಿಂದ ಪ್ರೀತಿಯ ಮಹಾಪೂರವೇ ಹರಿದುಬಂದಿದೆ. ಮೀರಾ ಎರಡು ಮಕ್ಕಳ ತಾಯಿಯಾದರೂ ಇಂದಿಗೂ ತಮ್ಮ ಸೌಂದರ್ಯವನ್ನು ಸಿನಿಮಾ ನಟಿಯರಿಗಿಂತ ತುಸು ಹೆಚ್ಚೇ  ಕಾಪಾಡಿಕೊಂಡಿದ್ದಾರೆ. ಫಿಟ್‌ನೆಸ್ ಮತ್ತು ಸ್ಟೈಲಿಸ್‌ ಫ್ರೀಕ್ ಆಗಿರುವ ಮೀರಾಳ ಗುಣ ಮಗಳು ಮಿಶಾಗೂ ಹರಿದು ಬಂದಿರುವುದರಲ್ಲಿ ಆಶ್ಚರ್ಯವಿಲ್ಲ ಅನ್ನುವುದು ಅಭಿಮಾನಿಗಳ ಮಾತು.

ಮೀರಾ ಕಪೂರ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದಿಂದ ಹಿಡಿದು ವಿವಿಧ ಸಂದರ್ಭಗಳಲ್ಲಿ ತೆಗೆದ ಮಿಶಾಳ ಆಲ್ಬಂಗಳ ಸಂಗ್ರಹವೇ ತುಂಬಿದೆ. ಅಪ್ಪ–ಅಮ್ಮನ ಜತೆಯಷ್ಟೇ ಅಲ್ಲದೆ ಅಜ್ಜ ಮತ್ತು ಪುಟ್ಟ ತಮ್ಮನ ಜತೆಗೂ ಮಿಂಚುತ್ತಿರುವ ಮಿಶಾಳ ಪೋಟೊಗಳು ನೋಡಲು ಆಕರ್ಷಕವಾಗಿವೆ. 

ಮಿಶಾಳ ತುಂಟಾಟಗಳ ಜತೆಗೆ ಅವಳನ್ನು ಜತನದಿಂದ ಬೆಳೆಸುತ್ತಿರುವ ಬಗ್ಗೆಯೂ ಮೀರಾ ಆಗಾಗ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಅಭ್ಯಾಸ ಹೊಂದಿದ್ದಾರೆ.  ಈಚೆಗಷ್ಟೆ ಮಿಶಾ ಮತ್ತು ಅವಳ ಸ್ನೇಹಿತರಿಗಾಗಿ ಮನೆಯಲ್ಲಿ ಡಾನ್ಸ್ ಪಾರ್ಟಿಯನ್ನು ಮೀರಾ ಆಯೋಜಿಸಿದ್ದರಂತೆ. ಅದರಲ್ಲಿ ಮಿಶಾ ಮತ್ತು ಆಕೆಯ ಸ್ನೇಹಿತರು ಇಷ್ಟಪಡುವ ಡೋನಟ್, ಜೆಲ್ಲಿ, ಫ್ರೈ ಮಾಡಿರುವ ತಿಂಡಿ–ತಿನಿಸುಗಳನ್ನು ಮೀರಾ ಜೋಡಿಸಿಟ್ಟಿದ್ದರು.  ‘ಬೆಳೆಯುತ್ತಿರುವ ಮಕ್ಕಳಿಗೆ ತಾಯಂದಿರು ತಿನ್ನುವ ವಿಚಾರದಲ್ಲಿ ಕೆಲವೊಮ್ಮೆ ನಿರ್ಬಂಧ ಹಾಕುವುದನ್ನು ಬಿಡಬೇಕಾಗುತ್ತದೆ. ಒಂದು ದಿನವಾದರೂ ಅವರಿಗಿಷ್ಟವಾಗು ಚಾಕಲೇಟ್, ಡೋನಟ್ಸ್, ಜೆಲ್ಲಿಯಂಥ ತಿನಿಸುಗಳನ್ನು ತಿನ್ನಲು ಬಿಡಬೇಕು’ ಎಂದು ಮೀರಾ ಸಲಹೆ ನೀಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !