ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್‌ ಯು ಅಣ್ಣಾ...: ಅಂಬರೀಷ್‌ ನೆನಪಿಸಿಕೊಂಡು ಭಾವುಕರಾದ ಯಶ್‌

ಅಂಬಿ ನೆನಪಿಸಿಕೊಂಡು ಭಾವುಕರಾದ ನಟ ಯಶ್‌
Last Updated 21 ಡಿಸೆಂಬರ್ 2018, 10:19 IST
ಅಕ್ಷರ ಗಾತ್ರ

ಬೆಂಗಳೂರು: ‌‘ಕೆಜಿಎಫ್‌’ ಚಿತ್ರ ಶುಕ್ರವಾರ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡು ಹವಾ ಎಬ್ಬಿಸಿದೆ. ಕಳೆದ ಎರಡು ವರ್ಷದಿಂದಲೂ ನಟ ಯಶ್‌ ಅಭಿನಯದ ಯಾವುದೇ ಚಿತ್ರ ತೆರೆಕಂಡಿರಲಿಲ್ಲ. ಮೊದಲ ದಿನವೇ ಭರ್ಜರಿ ಆರಂಭ ಕಂಡಿರುವ ಈ ಸಿನಿಮಾ ರಾಕಿಂಗ್‌ ಸ್ಟಾರ್‌ ಅವರ ವೃತ್ತಿಬದುಕಿಗೂ ಹೊಸ ಹುರುಪು ನೀಡಿದೆ.

ಈ ಸಂಭ್ರಮದ ನಡುವೆಯೇ ಯಶ್‌ ಅವರು, ‘ರೆಬಲ್‌ ಸ್ಟಾರ್’ ಅಂಬರೀಷ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಂಬಿಯ ಭಾವಚಿತ್ರಕ್ಕೆ ನಮಿಸುವ ಫೋಟೊ ಹಾಕಿ ‘Miss you Anna...’ ಎಂದು ಬರೆದುಕೊಂಡಿದ್ದಾರೆ.

Miss you Anna...

A post shared by Actor Yash (@thenameisyash) on

ಯಶ್‌ ಅಂಬಿಯ ಮಗನಂತೆ ಇದ್ದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಶ್ ಮನೆಯ ಎಲ್ಲ ಶುಭ ಕಾರ್ಯಕ್ರಮಗಳಿಗೂ ಅಂಬಿ ದಂಪತಿ ಹಾಜರಾಗುತ್ತಿದ್ದರು. ಜೊತೆಗೆ, ರಾಕಿಂಗ್‌ ಸ್ಟಾರ್‌ ಅವರ ಮಗಳಿಗೆ ಅಂಬಿ ಕಲಘಟಗಿಯಿಂದ ತೊಟ್ಟಿಲು ಬುಕ್‌ ಮಾಡಿದ್ದರು.

ಅಂಬರೀಷ್‌ ನಿಧನರಾದಾಗ ಅವರ ಕುಟುಂಬದ ಜೊತೆಗಿದ್ದು ಎಲ್ಲ ಕಾರ್ಯಗಳನ್ನು ನಡೆಸಿಕೊಟ್ಟರು ಯಶ್. ಬಹುನಿರೀಕ್ಷಿತ ‘ಕೆಜಿಎಫ್’ ಬಿಡುಗಡೆಯಾಗಿದ್ದು, ಅಂಬರೀಷ್‌ ಇಲ್ಲದಿರುವುದು ಯಶ್‌ಗೆ ನೋವುಂಟು ಮಾಡಿದೆಯಂತೆ. ಅಂಬರೀಷ್‌ ಅಣ್ಣ ನನ್ನ ಕೆಜಿಎಫ್‌ ಚಿತ್ರವನ್ನು ನೋಡಬೇಕೆಂದು ಯಶ್ ಹೇಳಿಕೊಂಡಿದ್ದರು.

ಅಂಬಿಯ ಮನೆಗೆ ತೆರಳಿದ್ದ ಅವರು ಅಂಬಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿರುವ ಈ ಫೋಟೊಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT