ಬುಧವಾರ, ಜುಲೈ 15, 2020
22 °C

ಧನುಷ್‌ ಚಿತ್ರಕ್ಕೆ ಮಿತ್ರನ್‌ ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಡಿಸೆಂಬರ್‌ ತಿಂಗಳಲ್ಲಿ ತಮಿಳು ನಟ ಧನುಷ್‌ ತಮ್ಮ 44ನೇ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಇದನ್ನು ಮಿತ್ರನ್‌ ಜವಾಹರ್‌ ನಿರ್ದೇಶಿಸಲಿದ್ದಾರೆ ಎಂಬ ಸಂಗತಿಯನ್ನು ಚಿತ್ರತಂಡ ಈಗ ಬಹಿರಂಗಪಡಿಸಿದೆ.

ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.  ಧನುಷ್‌– ಮಿತ್ರನ್‌ ಜೋಡಿಯ ನಾಲ್ಕನೇ ಚಿತ್ರವಿದು. ಈ ಹಿಂದೆ ಇವರಿಬ್ಬರು ‘ಯಾರಡಿ ನೀ ಮೋಹಿನಿ’, ‘ಕುಟ್ಟಿ’, ‘ಉತ್ತಮ ಪುತ್ರನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಎಲ್ಲಾ ಧನುಷ್‌ ಅವರದೇ ಎನ್ನಲಾಗಿದೆ. 

ಧನುಷ್‌ ಅಭಿನಯಿಸುತ್ತಿರುವ ‘ಜಗಮೇ ತಂದಿರಂ’‌ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್‌ಡೌನ್ ಸಂಪೂರ್ಣ‌ ತೆರವಾದ ಕೂಡಲೇ ಬಿಡುಗಡೆಯಾಗಲಿದೆ. ಈ ಆ್ಯಕ್ಷನ್‌ ಥ್ರಿಲ್ಲರ್‌  ಚಿತ್ರವನ್ನು ನಿರ್ದೇಶಿಸಿದವರು ಕಾರ್ತಿಕ್‌ ಸುಬ್ಬರಾಜ್‌. 

ಹಾಗೆಯೇ ಮಾರಿ ಸೆಲ್ವರಾಜ್‌ ನಿರ್ದೇಶನದ ‘ಕರ್ಣನ್’‌ ಚಿತ್ರದಲ್ಲೂ ಧನುಷ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲ ಭಾಗಗಳ ಚಿತ್ರೀಕರಣ ಬಾಕಿಯಾಗಿದ್ದು, ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದೆ. 

ಧನುಷ್‌ ಅವರ 43ನೇ ಸಿನಿಮಾವನ್ನು ಸತ್ಯಜ್ಯೋತಿ ಫಿಲ್ಮ್ಸ್‌ ನಿರ್ಮಾಣ ಮಾಡಲಿದ್ದು, ಕಾರ್ತಿಕ್‌ ನರೇನ್‌ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಧನುಷ್‌ ತಯಾರಿ ನಡೆಸಿದ್ದು, ಲಾಕ್‌ಡೌನ್‌ ನಂತರ ಸೆಟ್ಟೇರುವ ನಿರೀಕ್ಷೆಯಿದೆ. ಈ ಎರಡೂ ಚಿತ್ರಗಳ ಕೆಲಸ ಪೂರ್ಣಗೊಂಡ ಬಳಿಕ ಮಿತ್ರನ್‌ ಜವಾಹರ್‌ ನಿರ್ದೇಶನದ ಹೊಸ ಸಿನಿಮಾದ ಕೆಲಸಗಳು ಆರಂಭವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು