ನ.9ಕ್ಕೆ ‘ಎಂಎಲ್ಎ’ ಬಿಡುಗಡೆ

7

ನ.9ಕ್ಕೆ ‘ಎಂಎಲ್ಎ’ ಬಿಡುಗಡೆ

Published:
Updated:
Deccan Herald

ವೆಂಕಟೇಶ್ ರೆಡ್ಡಿ ಅವರು ನಿರ್ಮಾಣ ಮಾಡಿರುವ ‘ಎಂಎಲ್ಎ’ ಚಿತ್ರ ಇದೇ 9ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ಪಿ.ಆರ್.ಕೆ ಆಡಿಯೊ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿವೆ. ವೆಂಕಿ ಪಾಲುಗುಳ್ಳ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಮೌರ್ಯ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ನಾಯಕನಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸಿದ್ದಾರೆ.

ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಸ್ಪರ್ಷ ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಂಸುಬ್ರಮಣ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಅವರ ಛಾಯಾಗ್ರಹಣವಿದೆ. ಸಂಕಲನದ ಜವಾಬ್ದಾರಿಯನ್ನು ಕೆ.ಆರ್.ಲಿಂಗರಾಜು ಹೊತ್ತಿದ್ದರೆ, ನೃತ್ಯ ನಿರ್ದೇಶನವನ್ನು ಕಲೈ ಅವರು ಹಾಗೂ ಕಲಾ ನಿರ್ದೇಶನವನ್ನು ದೇವಿಪ್ರಕಾಶ್ ನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !