‘ಗತವೈಭವ’ ಸಿನಿಮಾ ಬಳಿಕ ನಿರ್ದೇಶಕ ಸುನಿ ನಿರ್ದೇಶನದ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶೀಲಂ ಎಂ.ಸ್ವಾಮಿ ನಾಯಕರಾಗಿ ನಟಿಸಿರುವ ‘ಮೋಡ ಕವಿದ ವಾತಾವರಣ’ ಸಿನಿಮಾ ಜೂನ್ 26ಕ್ಕೆ ತೆರೆಕಾಣಲಿದೆ.

ಕೆಲ ತಿಂಗಳ ಹಿಂದೆ ಸಿನಿಮಾದ ‘ನನ್ನದೆಯಾ ಹಾಡೊಂದನು..’ ಎಂಬ ಸಿಂಗಲ್ ಟೇಕ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸುನಿ ಅವರ ಜೊತೆಯೇ ಹಲವು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಶೀಲಂ ಈ ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದಾರೆ. ಕಾಲೇಜು ಹುಡುಗನಾಗಿ ಅವರು ಕಾಣಿಸಿಕೊಂಡಿದ್ದು, ರಿವರ್ಸ್ ಸ್ಕ್ರೀನ್ಪ್ಲೇಯಲ್ಲಿ ಈ ಸಿನಿಮಾ ಕಥೆ ಸಾಗಲಿದೆ. ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾದಲ್ಲಿ ಶೀಲಂಗೆ ಜೋಡಿಯಾಗಿ ‘ಕೋಟಿ’ ಸಿನಿಮಾ ಖ್ಯಾತಿಯ ಮೋಕ್ಷ ಕುಶಾಲ್ ಹಾಗೂ ಸಾತ್ವಿಕ ನಟಿಸಿದ್ದಾರೆ.

‘ಒಂದು ಸರಳ ಪ್ರೇಮಕತೆ’ ಚಿತ್ರದ ನಿರ್ಮಾಪಕರಾದ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುನಿ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಬರೆದಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಸರೆಗಮ ಒಳ್ಳೆಯ ಮೊತ್ತಕ್ಕೆ ಆಡಿಯೊ ಹಕ್ಕನ್ನು ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.