ಶುಕ್ರವಾರ, ನವೆಂಬರ್ 15, 2019
20 °C

ತನಿಖಾ ಅಧಿಕಾರಿ ಪಾತ್ರದಲ್ಲಿ ಮೋಹನ್‌ಲಾಲ್‌

Published:
Updated:

ಮೆಗಾಸ್ಟಾರ್‌ ಮೋಹನ್‌ಲಾಲ್‌ ತಮ್ಮ ಮುಂದಿನ ಚಿತ್ರದಲ್ಲಿ ಪತ್ತೇದಾರಿ ಪೊಲೀಸ್‌ ಅಧಿಕಾರಿ ಪಾತ್ರವನ್ನು ನಿರ್ವಹಿಸಲಿದ್ದಾರೆ.  ಈ ಸಿನಿಮಾವು ಕೇರಳದಲ್ಲಿ ಹೆಚ್ಚು ಸದ್ದು ಮಾಡಿದ ಕೊಲೆ ಪ್ರಕರಣವೊಂದರ ಎಳೆಯನ್ನು ಹೊಂದಿದೆ ಎನ್ನಲಾಗಿದೆ.  

ಸಿನಿಮಾದ ಚಿತ್ರೀಕರಣವು 2020ರ ಫೆಬ್ರುವರಿ ತಿಂಗಳಲ್ಲಿ ಆರಂಭವಾಗಲಿದೆ.

ಮೋಹನ್‌ಲಾಲ್‌ ನಟಿಸಿರುವ ‘ಲೂಸಿಫರ್‌’ ಸಿನಿಮಾಕ್ಕೆ ಹೆಚ್ಚು ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾವನ್ನು ನಟ, ನಿರ್ದೇಶಕ ಫೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನ ಮಾಡಿದ್ದು, ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಪ್ರೇಕ್ಷಕರು ಈ ಚಿತ್ರದಲ್ಲಿ ಮೋಹನ್‌ಲಾಲ್‌ ಅಭಿನಯಕ್ಕೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ‘ಲೂಸಿಫರ್‌’ ಚಿತ್ರದ ಸೀಕ್ವೆಲ್‌ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಪೃಥ್ವಿರಾಜ್‌ ಘೋಷಿಸಿದ್ದಾರೆ. ‘ಲೂಸಿಫರ್‌ 2’ರಲ್ಲೂ ಮೋಹನ್‌ಲಾಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಚಿತ್ರದ ಅಧಿಕೃತ ಘೋಷಣೆಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ಮೋಹನ್ ಲಾಲ್ ಈಗ ‘ಬಿಗ್ ಬ್ರದರ್’

ಪ್ರತಿಕ್ರಿಯಿಸಿ (+)