ಮಂಗಳವಾರ, ಸೆಪ್ಟೆಂಬರ್ 21, 2021
22 °C
ಮೋಹನ್ ಲಾಲ್–ಸಿದ್ದಿಕಿ ಜೋಡಿಯಲ್ಲಿ ‘ಬಿಗ್ ಬ್ರದರ್’ ಸಿನಿಮಾ

ಮೋಹನ್ ಲಾಲ್ ಈಗ ‘ಬಿಗ್ ಬ್ರದರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳಂ ಸಿನಿರಂಗದ ಖ್ಯಾತನಟ ಮೋಹನ್ ಲಾಲ್ ಈಗ ‘ಬಿಗ್ ಬ್ರದರ್’ ಆಗಿದ್ದಾರೆ. ಹೌದು. ಜುಲೈ ಒಂದರಿಂದ ಲಾಲ್, ‘ಬಿಗ್ ಬ್ರದರ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿದ್ಧಿಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲಾಲ್ ಮತ್ತು ಸಿದ್ಧಿಕಿ ಜತೆಯಾಗಿ ಮಾಡುತ್ತಿರುವ ಮೂರನೇ ಚಿತ್ರವಿದು. ಈ ಹಿಂದೆ ಇಬ್ಬರೂ ಲೂಸಿಫರ್, ವಿಯೆಟ್ನಾಂ ಕಾಲೊನಿ ಮತ್ತು ಲೇಡಿಸ್ ಅಂಡ್ ಜಂಟಲ್ ಮ್ಯಾನ್ ಸಿನಿಮಾದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು.

‘ಕಳೆದ ವರ್ಷವೆ ಈ ಪ್ರಾಜೆಕ್ಟ್ ಬಗ್ಗೆ ಮೋಹನ್ ಲಾಲ್ ಅವರೊಂದಿಗೆ ಚರ್ಚಿಸಿದ್ದೆ. ಚಿತ್ರದ ಫೈನಲ್ ಡ್ರಾಫ್ಟ್‌ ಮತ್ತು ಸ್ಕ್ರಿಪ್ಟ್ ಬಹುತೇಕ ಪೂರ್ಣಗೊಂಡಿದೆ. ಒಂದು ವರ್ಷದಿಂದ ಈ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದೆ. ಈ ಸಿನಿಮಾದಲ್ಲಿ ರೊಮಾನ್ಸ್‌, ಕಾಮಿಡಿ, ಆ್ಯಕ್ಷನ್, ಡ್ರಾಮಾ... ಹೀಗೆ ಎಲ್ಲವೂ ಇದೆ’ ಎಂದು ನಿರ್ದೇಶಕ ಸಿದ್ಧಿಕಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಈ ಸಿನಿಮಾದಲ್ಲಿ ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿದ್ದು, ಇದು ಅರ್ಬಾಜ್ ಅವರ ಮೊದಲ ಮಲಯಾಳಂ ಸಿನಿಮಾ ಆಗಲಿದೆ ಎನ್ನುವುದು ವಿಶೇಷ ಸಂಗತಿ. ಅರ್ಬಾಜ್ ಅವರದ್ದು ಇದರಲ್ಲಿ ಪ್ರತಿನಾಯಕನ ಪಾತ್ರ. ಸದ್ಯಕ್ಕೆ ಅರ್ಬಾಜ್ ಸಲ್ಮಾನ್ ಖಾನ್ ಅವರ ‘ದಬಾಂಗ್ 3’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದು ಮುಗಿಯುತ್ತಿದ್ದಂತೆಯೇ ‘ಬಿಗ್ ಬ್ರದರ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಹಿಂದೆ ಮಲಯಾಳಂನಲ್ಲಿ ಹಿಟ್ ಆಗಿದ್ದ ‘ಬಾಡಿಗಾರ್ಡ್‌’ ಸಿನಿಮಾವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್‌ಗಾಗಿ ಸಿದ್ಧಿಕಿ ನಿರ್ದೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು