ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಯಾವ ಚಿತ್ರಕ್ಕೆ?

Last Updated 18 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಕಳೆದ ವರ್ಷ ತೆರೆಕಂಡ ಅತ್ಯುತ್ತಮ ಸಿನಿಮಾಗಳ ‘ಜಾತಕ’ಗಳನ್ನು ಹರಡಿಕೊಂಡು ಕುಳಿತಿರುವ ಕೇರಳ ಚಲನಚಿತ್ರ ಅಕಾಡೆಮಿಗೆ ಉಭಯಸಂಕಟವೊಂದು ಎದುರಾಗಿದೆ. ’ಆಮಿ‘ ಮತ್ತು ‘ಕಾರ್ಬನ್‌’ ಸಿನಿಮಾಗಳನ್ನುಪ್ರಶಸ್ತಿಗೆ ಪರಿಗಣಿಸಬೇಕೇ ಬೇಡವೇ ಎಂಬುದು, ಎದುರಾಗಿರುವ ಗೊಂದಲ.

ಇದಕ್ಕೆ ಕಾರಣ, ಈ ಎರಡೂ ಸಿನಿಮಾಗಳಲ್ಲಿ ಅಕಾಡೆಮಿ ಅಧ್ಯಕ್ಷಕಮಲ್‌ಹಾಸನ್‌ ಹಾಗೂ ಉಪಾಧ್ಯಕ್ಷೆ ಬೀನಾ ಪೌಲ್‌ ಅವರ ಮಹತ್ವದ ಪಾತ್ರ.

ಹೆಸರಾಂತ ಕವಯತ್ರಿ ಕಮಲಾ ಸುರಯ್ಯಾ ಅವರ ಜೀವನವನ್ನು ವಸ್ತುವಾಗಿಟ್ಟುಕೊಂಡು ‘ಆಮಿ’ಯನ್ನು ಮಲ್‌ಹಾಸನ್‌ನಿರ್ದೇಶಿಸಿದ್ದಾರೆ. ‘ಕಾರ್ಬನ್‌’ಗೆ ಬೀನಾ ಪೌಲ್‌ ಅವರ ಸಂಕಲನವಿದೆ. ಆದರೆ ಈ ಎರಡೂ ಚಿತ್ರಗಳು 2018ರಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿವೆ. ಹೀಗಾಗಿ, ಈ ಎರಡೂ ಚಿತ್ರಗಳನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಡುವುದೇ ಸೂಕ್ತ ಎಂಬುದು ಕೆಲವರ ಅಭಿಪ್ರಾಯ.

ಆಮಿಯಲ್ಲಿ ಕಮಲಾ ಸುರಯ್ಯಾ ಪಾತ್ರವನ್ನು ಮಂಜು ವಾರಿಯರ್‌ ಮಾಡಿರುವುದು ಗಮನಾರ್ಹ. ಅಡ್ವೆಂಚರ್ ಥ್ರಿಲ್ಲರ್‌ ‘ಕಾರ್ಬನ್‌’ ತನ್ನ ತಾರಾಮೌಲ್ಯಗಳಿಂದಲೂ ಸುದ್ದಿಯಲ್ಲಿತ್ತು. ಫಹಾದ್‌ ಫಾಸಿಲ್‌ ಮತ್ತು ಮಮತಾ ಮೋಹನದಾಸ್‌ ಮುಖ್ಯ ಭೂಮಿಕೆಯ ಚಿತ್ರ. ಅಲ್ಲದೆ, ಬಾಲಿವುಡ್‌ನ ಚಿತ್ರ ನಿರ್ದೇಶಕ ವಿಶಾಲ್‌ ಭಾರದ್ವಾಜ್‌, ಸಿನೆಮಾಟೊಗ್ರಾಫರ್‌ ಕೆ.ಯು.ಮೋಹನನ್‌ ಅವರನ್ನೂ ಈ ಚಿತ್ರತಂಡ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT