ಆ್ಯಕ್ಷನ್‌ ಕಟ್‌ಗೆ ಸಜ್ಜಾದ ಮೋಹನ್‌ಲಾಲ್

ಮಂಗಳವಾರ, ಮೇ 21, 2019
23 °C

ಆ್ಯಕ್ಷನ್‌ ಕಟ್‌ಗೆ ಸಜ್ಜಾದ ಮೋಹನ್‌ಲಾಲ್

Published:
Updated:
Prajavani

ನಾಲ್ಕು ದಶಕಗಳಿಂದ ನಟನೆ ಮೂಲಕ ಮಲಯಾಳ ಪ್ರೇಕ್ಷಕರನ್ನು ಮೋಡಿ ಮಾಡಿರುವ ನಟ ಮೋಹನ್‌ಲಾಲ್‌ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

ನಿರ್ದೇಶಕನಾಗುವ ತಮ್ಮ ಮನದ ಇಂಗಿತವನ್ನು ಅವರೇ ಬ್ಲಾಗ್ ಬರಹದ ಮೂಲಕ ತೋಡಿಕೊಂಡಿದ್ದಾರೆ. ‘ಇದುವರೆಗೆ ಮಾಡದ ಕಾರ್ಯವನ್ನು ಮಾಡಲು ನನ್ನ ಮನಸ್ಸು ಆಶಿಸುತ್ತಿದೆ. ನಾನೊಂದು ಸಿನಿಮಾ ನಿರ್ದೇಶನ ಮಾಡಲಿದ್ದೇನೆ’ ಎಂದು ಬ್ಲಾಗ್‌ನಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. 

‘ಇಲ್ಲಿಯವರೆಗೆ ತೆರೆಯಲ್ಲಿ ಕಾಣಿಸಿಕೊಂಡಿದ್ದ ನಾನು ತೆರೆಯ ಹಿಂದೆ ಕೆಲಸ ಮಾಡಲು ಬಯಸುತ್ತೇನೆ. ನಾನು ‘ಬಾರೋಸ್’ ಹೆಸರಿನ ಬಿಗ್‌ ಬಜೆಟ್‌ ಥ್ರೀಡಿ ಚಿತ್ರ ನಿರ್ದೇಶಿಸಲಿದ್ದೇನೆ’ ಎಂದೂ ಚಿತ್ರದ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಮಕ್ಕಳು ಮತ್ತು ಹಿರಿಯರಿಗೆ ಇಷ್ಟವಾಗುವಂತೆ ಮೋಹನ್‌ಲಾಲ್‌ ಈ ಸಿನಿಮಾ ನಿರ್ದೇಶಿಸಲಿದ್ದಾರಂತೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್‌ ನಡೆಸಲು ಅವರು ಯೋಜನೆ ರೂಪಿಸಿದ್ದಾರೆ. 

ಮೋಹನ್‌ಲಾಲ್‌ ಅವರ ಈ ಘೋಷಣೆ ಅವರ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದೆ. ಈಗಲೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅವರ ನಿರ್ದೇಶನದಲ್ಲಿ ಮೂಡಿಬರುವ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಮಾಲಿವುಡ್‌ ಸಿನಿಮಾ ಪ್ರೇಕ್ಷಕರದ್ದು. 

ವಾಸ್ಕೋಡಿಗಾಮನ ಸಂಪತ್ತಿನ ಕಾವಲುಗಾರನಾದ ಬಾರೋಸ್‌ನ ಕಥೆ ಇದು. ಪೋರ್ಚುಗೀಸ್‌ ಕಾಲದ ಕಥಾಹಂದರ ಹೊಂದಿದೆ. ಹಾಗಾಗಿ, ಆ ಕಾಲದ ಸೆಟ್‌ ಹಾಕಲು ನಿರ್ಧರಿಸಲಾಗಿದೆ. ಬಾರೋಸ್‌ ಪಾತ್ರದಲ್ಲಿ ಮೋಹನ್‌ಲಾಲ್‌ ಅವರೇ ನಟಿಸಲಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !