ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಚಿತ್ರದ ‘ಎದೆ ಎತ್ತು, ತೊಡೆ ತಟ್ಟು ಬೆಂಗ್ಳೂರು ನಮ್ದೇನೆ‘ ಎಂಬ ಹಾಡು ನಾಳೆ (ಮಾರ್ಚ್ 9) ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಡಾಲಿ ಧನಂಜಯ್, ‘ಇವರ ಹಾಡು ಕೇಳದೇ ಇರೋ ಕಾಲೇಜು ಹುಡುಗರು ಗೂಗಲ್ ಮಾಡಿದರೂ ಸಿಗಲ್ಲ, ಅದರಲ್ಲಿ ನಾನೂ ಒಬ್ಬ. ಎಷ್ಟೋ ಟ್ರೆಂಡ್ಗಳಿಗೆ 'ಗುರು' ಮತ್ತೆ ಬರ್ತಾವ್ರೆ ನಾಳೆ’ ಎಂದು ಬರೆದುಕೊಂಡಿದ್ದಾರೆ.

ಈ ಹಾಡಿಗೆ ಗುರು ಕಿರಣ್ ಅವರು ಈ ಹಾಡಿಗೆ ಧ್ವನಿ ನೀಡಿದ್ದರೆ, ಡಾಲಿ ಅವರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದಲ್ಲಿ ನಾಗಭೂಷಣ, ವಿನಯಾ ಪ್ರಕಾಶ್, ಡಾಲಿ ಧನಂಜಯ, ಗುರುದತ್ ಸೇರಿ ಅನೇಕರು ನಟಿಸಿದ್ದಾರೆ.

ಪೂರ್ಣಚಂದ್ರ ಅವರ ನಿರ್ದೇಶನದ ಈ ಚಿತ್ರವನ್ನು ಡಾಲಿ ಪಿಕ್ಚರ್ ಅಡಿ ನಿರ್ಮಾಣ ಮಾಡಲಾಗಿದೆ. ರಾಹುಲ್ ರಾಯ್ ಅವರ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.