ಗುರುವಾರ , ಜನವರಿ 30, 2020
19 °C

ದರ್ಶನ್‌ ಜತೆಗಿದ್ದಾಗ ಸಕ್ಸಸ್‌ ಖಚಿತ: ಸಂಸದೆ ಸುಮಲತಾ ಅಂಬರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನನ್ನ ಮಗ ದರ್ಶನ್‌, ನನ್ನ ಮಗ ನನ್ನ ಜತೆ ಇರುವಾಗ ಯಾವಾಗಲೂ ನನಗೆ ಸಕ್ಸಸ್‌ ಹಂಡ್ರೆಡ್‌ ಪರ್ಸೆಂಟ್‌ ಸಿಕ್ಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿ ಈ ಅಭಿಪ್ರಾಯಪಟ್ಟರು.

‘ಟ್ರೇಲರ್‌ ಬಿಡುಗಡೆ ಮಾಡಿರುವುದರಿಂದ ಈ ಚಿತ್ರವು ಯಶಸ್ವಿಯಾಗುವುದು ಖಚಿತ’ ಎಂದು ಸುಮಲತಾ ಅಭಿಮಾನದಿಂದ ಹೇಳಿದ್ದಾರೆ.

ಸುಮಲತಾ ಅವರು ದರ್ಶನ್‌ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರೆ, ದರ್ಶನ್‌ ಸಹ ಸುಮಲತಾ ಅವರನ್ನು ಅಮ್ಮ ಎಂದೇ ಕರೆದು, ಅಷ್ಟೇ ಅಭಿಮಾನ, ಗೌರವ ತೋರಿದರು.

ಚಿತ್ರದಲ್ಲಿ ಎನ್‌ಆರ್‌ಐ ಮಕ್ಕಳಿಗೆ ಕನ್ನಡ ಕಲಿಸುವ ಎನ್‌ಆರ್‌ಐ ಶಿಕ್ಷಕಿಯ ಪಾತ್ರ ನಿಭಾಯಿಸಿರುವ ಸುಮಲತಾ ಅವರು, ನನ್ನ ಪಾತ್ರ ಚಿಕ್ಕದಾದರೂ, ನನ್ನ ಪಾತ್ರದ ದೃಶ್ಯಗಳು ಕಡಿಮೆ ಇದ್ದರೂ ಆ ಪಾತ್ರವನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಈ ಪಾತ್ರದಲ್ಲಿ ತುಂಬಾ ಖುಷಿಯಿಂದ ನಟಿಸಿದ್ದೇನೆ’ ಎಂದರು.

ಕನ್ನಡ ಕಲಿ’ ಹಾಡು ಇಷ್ಟ: ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶಿಸಿರುವ, ವಶಿಷ್ಠ ಸಿಂಹ ನಾಯಕನಾಗಿ ನಟಿಸಿರುವ ಬಹು ನಿರೀಕ್ಷೆಯ ಈ ಚಿತ್ರದ ಟ್ರೇಲರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಿದರು. ‘ಚಿತ್ರದ ಟೈಟಲ್‌ ಕೂಡ ಚೆನ್ನಾಗಿದೆ. ‘ಕನ್ನಡ ಕಲಿ’ ಹಾಡು ‌ತುಂಬಾ ಇಷ್ಟವಾಗುವಂತಿದೆ. ನಾಗತಿಹಳ್ಳಿ ಸರ್‌ ತಮ್ಮ ಚಿತ್ರದಲ್ಲಿ ಏನಾದರೊಂದು ಟಚ್‌ ಕೊಟ್ಟಿರುತ್ತಾರೆ’ ಎಂದು ದರ್ಶನ್‌ ಪ್ರಶಂಸಿಸಿದರು.

‘ಮೊನ್ನೆ ಸಾಹಿತಿ ‘ಕನ್ನಡ ಗರುಡ’ ತೀರಿ ಹೋದ ಸುದ್ದಿಯನ್ನು ಆಗಷ್ಟೇ ಟಿ.ವಿಯಲ್ಲಿ ನೋಡುತ್ತಿದ್ದೆ. ಸಾಹಿತಿ ಎಂದು ಯಾರಿಗೆ ಹೇಳುತ್ತೀವಿ ಎನ್ನುವುದು ನನ್ನ ಮಗನಿಗೆ ಗೊತ್ತಿರಲಿಲ್ಲ. ಆಗ ನನಗೆ ನಾವು ಯಾವ ದಿಕ್ಕಿನ ಕಡೆಗೆ ಹೋಗುತ್ತಿದ್ದೇವೆ ಎನಿಸಲಾರಂಭಿಸಿತು. ಸುಮಲತಾ ಅಮ್ಮ ನಟಿಸಿರುವ ‘ಕನ್ನಡ ಕಲಿ’ ಹಾಡಿನಲ್ಲಿ ನಾಡಿನ ಪ್ರಮುಖ ಸಾಹಿತಿಗಳನ್ನು ನಿರ್ದೇಶಕರು ಪರಿಚಯಿಸಿದ್ದಾರೆ. ನಮ್ಮ ಮಕ್ಕಳಿಗೆ ನಾವು ಏನು ಕಲಿಸಬೇಕು, ನಾಡು– ನುಡಿಯ ಮೇಲೆ ಹೇಗೆ ಅಭಿಮಾನ ಮೂಡಿಸಬೇಕೆನ್ನುವುದನ್ನು ಹೇಳಿದ್ದಾರೆ. ಈ ಹಾಡು ನನಗೆ ತುಂಬಾ ಇಷ್ಟವಾಯಿತು’ ಎಂದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ವಶಿಷ್ಠ ಸಿಂಹ ಕಲೆಯ ಮೇಲಿನ ಮೋಹದಿಂದ ಸಿನಿಮಾ ರಂಗಕ್ಕೆ ಬಂದವರು. ಖಳನಟನ ಪಾತ್ರಗಳಲ್ಲೇ ಹೆಚ್ಚು ನಟಿಸಿದವರು. ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ. ‘ಈವರೆಗೆ ಪೋಷಕ ಪಾತ್ರ ಅಥವಾ ಖಳನಾಯಕನ ಪಾತ್ರ ಮಾಡಿಕೊಂಡು ಬಂದಿದ್ದೆ. ನನಗೆ ಮೇಸ್ಟ್ರು ನನಗೆ ನಾಯಕನಾಗುವ ಅವಕಾಶ ನೀಡಿದ್ದಾರೆ. 2020ರಲ್ಲಿ ನನ್ನ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ’ ಎಂದರು.

ಇದನ್ನೂ ಓದಿ: ಪರಿಚಯ ಇಲ್ಲದ ಪ್ರೊಫೈಲ್‌ ನನ್ನದಲ್ಲ: ಸುಮಲತಾ ಅಂಬರೀಷ್

ಚಿತ್ರದ ನಾಯಕಿ ಮಾನ್ವಿತಾ ಹರೀಶ್‌ ‘ಸುಮಲತಾ ಅವರ ಸಿನಿ ಪಯಣದಿಂದ ನಾನು ಸ್ಫೂರ್ತಿಗೊಂಡಿದ್ದೇನೆ. ಅವರ ಮಾತು, ಸಲಹೆ ಕೇಳಿದ ಮೇಲೆ ನನ್ನ ಕೊನೆ ಉಸಿರು ಇರುವವರೆಗೆ ನಾನು ಸಿನಿಮಾದಲ್ಲೇ ಮುಂದುವರಿಯಬೇಕು ಎನ್ನುವ ಸಂಕಲ್ಪ ಮಾಡಿರುವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು