7

ರಾಮಾಚಾರಿಯ ಮೋಸದಾಟ

Published:
Updated:

ವೇದಿಕೆ ಮುಂಭಾಗದ ಟೇಬಲ್‌ ಮೇಲಿದ್ದ ಎರಡು ಟೋಪಿಗಳು ಕಪ್ಪುಬಣ್ಣ ಮೆತ್ತಿಕೊಂಡು ಕುಳಿತಿದ್ದವು. ಅವುಗಳ ಮೇಲೆ ‘ಮಿಸ್ಟರ್‌ ಚೀಟರ್‌ ರಾಮಾಚಾರಿ’ ಎಂದು ಬರಹವಿತ್ತು. ಭ್ರಷ್ಟಾಚಾರದ ಸುತ್ತವೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ ಎಂದು ಅರ್ಥವಾಗಲು ಬಹುಹೊತ್ತು ಬೇಕಾಗಲಿಲ್ಲ.

ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ‘ಮಿಸ್ಟರ್‌ ಚೀಟರ್‌ ರಾಮಾಚಾರಿ’ ಸಿನಿಮಾ ನಿರ್ದೇಶಿಸಿದ್ದಾರೆ ರಾಮಾಚಾರಿ. ಕಥೆ, ಚಿತ್ರಕಥೆಯ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಅವರೇ ಈ ಚಿತ್ರದ ನಾಯಕ. ಬಹುತೇಕ ರಾಯಚೂರು ಜಿಲ್ಲೆಯ ಕಲಾವಿದರೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರ ಈ ವಾರ(ಜೂನ್ 22ರಂದು) ತೆರೆ ಕಾಣುತ್ತಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

ನಿರ್ದೇಶಕ ರಾಮಾಚಾರಿ, ‘ಚಿತ್ರದಲ್ಲಿ ನಾಯಕ, ನಾಯಕಿಯರು ಇಲ್ಲ. ಕಥೆಯೇ ನಾಯಕ. ತಂಡದಲ್ಲಿರುವ ಎಲ್ಲರೂ ಹೊಸಬರು. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಜನರು ಪ್ರೋತ್ಸಾಹ ನೀಡಬೇಕಿದೆ’ ಎಂದು ಕೋರಿದರು.

ನಿರ್ಮಾಪಕಿ ಪ್ರವೀಣಾ ಕುಲಕರ್ಣಿ, ‘ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರತಿಭೆಗಳ ಸಾಹಸಕ್ಕೆ ಪ್ರೇಕ್ಷಕರು ಬೆಂಬಲ ನೀಡಬೇಕಿದೆ’ ಎಂದರು.

ನಟಿ ಶಾಲಿನಿ ಭಟ್‌ ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿಕ್ಕ ಬಜೆಟ್‌ನ ಚಿತ್ರ. ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದೆ. ನನ್ನದು ಟೋ‍ಪಿ ಹಾಕುವವರಿಗೆಯೇ ಟೋಪಿ ಹಾಕುವ ಪಾತ್ರ’ ಎಂದು ವಿವರಿಸಿದರು.

ಮೇಘನಾ ಹೆಸರಿನ ಇಬ್ಬರು ನಟಿಯರು ನಟಿಸಿದ್ದಾರೆ. ಎಂಬತ್ತು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.


ಮೇಘನಾ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !