ಅನಂತ ನಾಗ್, ಆರತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಮುಳ್ಳಿನ ಗುಲಾಬಿ’ 1982ರಲ್ಲಿ ತೆರೆಕಂಡಿತ್ತು. 44 ವರ್ಷಗಳ ನಂತರ ಅದೇ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸ್ಮೈಲ್ ಶಿವು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಹೆಣ್ಣೊಬ್ಬಳು ಚಿಕ್ಕ ವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಏನೆಲ್ಲ ಆಗುತ್ತದೆ ಎಂಬುದೇ ಕಥೆ. ಆ ಮನೆಯಲ್ಲಿ ಅತ್ತೆ, ಮಾವನ ಕಡೆಯಿಂದ ಏನೆಲ್ಲ ಕಿರುಕುಳ, ಕಷ್ಟಗಳನ್ನು ಅನುಭವಿಸುತ್ತಾಳೆ, ಕೊನೆಗೆ ಅದನ್ನೆಲ್ಲ ಎದುರಿಸಿ ಹೇಗೆ ಸಮಾಜದಲ್ಲಿ ಬೆಳೆದು ನಿಲ್ಲುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಆಶಾ ಗುರುಲಿಂಗಯ್ಯ ಅವರ ಕಾದಂಬರಿಯನ್ನಾಧರಿಸಿದ ಚಿತ್ರವಿದು’ ಎಂದರು ನಿರ್ದೇಶಕ.

ಭೂಮಿಕಾ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಕೆ.ಶಿವಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಆಶಾ ಗುರುಲಿಂಗಯ್ಯ ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಸುವರ್ಣ ಛಾಯಾಚಿತ್ರಗ್ರಹಣ, ವಿನು ಮನಸು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.