ಬುಧವಾರ, ಡಿಸೆಂಬರ್ 11, 2019
27 °C

ಇಲ್ಲೊಂದು ಥಿಯೇಟರ್‌ ಕಥೆ

Published:
Updated:
Deccan Herald

ಪಿ.ಎಸ್‌. ಪ್ರವೀಣ್‌ ಭೂಷಣ್‌ ನಿರ್ದೇಶಿಸಿ ನಾಯಕ ನಟನಾಗಿ ನಟಿಸಿರುವ ‘ಮುಂದಿನ ಬದಲಾವಣೆ’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಚಿತ್ರಮಂದಿರದಲ್ಲಿಯೇ ಸಿನಿಮಾದ ಮುಕ್ಕಾಲು ಭಾಗದಷ್ಟು ಶೂಟಿಂಗ್ ನಡೆಸಲಾಗಿದೆಯಂತೆ. 

‘ಮಲ್ಟಿಫ್ಲೆಕ್ಸ್‌ ವ್ಯವಸ್ಥೆ ಬಂದ ಬಳಿಕ ಏಕ ಪರದೆ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ವೀಕ್ಷಣೆ ವೇಳೆ ಸಿಗುತ್ತಿದ್ದ ಖುಷಿ ಕಣ್ಮರೆಯಾಗಿದೆ. ಇದರ ಸುತ್ತವೇ ಕಥೆ ಹೊಸೆಯಲಾಗಿದೆ. ಚಿತ್ರತಂಡದ ಎಲ್ಲರೂ ಹೊಸಬರು. ಜನರು ಚಿತ್ರ ನೋಡಿ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು ನಿರ್ದೇಶಕ ಪ್ರವೀಣ್‌ ಭೂಷಣ್‌.

ಕಾಲೇಜು ಯುವಕರ ತಂಡವು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುತ್ತದೆಯಂತೆ. ಅಲ್ಲಿ ನಡೆಯುವ ಸನ್ನಿವೇಶಗಳ ಸುತ್ತ ಚಿತ್ರಕಥೆ ಸಾಗುತ್ತದೆ.

ಚಿತ್ರದ ಐದು ಹಾಡುಗಳನ್ನು ಪ್ರವೀಣ್‌ ಭೂಷಣ್‌ ಅವರೇ ರಚಿಸಿದ್ದಾರೆ. ಕಾರ್ತಿಕ್‌ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಪಿ.ಎಸ್‌. ಫಣಿ ಭೂಷಣ್‌ ಬಂಡವಾಳ ಹೂಡಿದ್ದಾರೆ. ಎನ್‌. ಕೋಟೇಶ್ವರ್‌ ಅವರ ಛಾಯಾಗ್ರಹಣವಿದೆ. ಸಂಗೀತಾ ಈ ಚಿತ್ರದ ನಾಯಕಿ. ಕೋಟೇಶ್‌, ಕಾವ್ಯಾಗೌಡ, ಮಾಲಾಶ್ರೀ, ಅಶ್ವಿನಿ ರಾವ್, ಆರ್ಯನ್ ತಾರಾಗಣದಲ್ಲಿದ್ದಾರೆ.

ಮೊದಲ ವಾರ ಹೆಚ್ಚಾಗಿ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು