ಬುಧವಾರ, ಆಗಸ್ಟ್ 21, 2019
24 °C

 ಮುನಿರತ್ನ ಕುರುಕ್ಷೇತ್ರ: ‘ಕೌರವ'ನಿಗೆ ಹೆಲಿಕಾಪ್ಟರ್‌ನಿಂದ ಪುಷ್ಪಾಭಿಷೇಕ

Published:
Updated:

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಾಧನ ಚಿತ್ರಮಂದಿರದಲ್ಲೂ ಬಿಡುಗಡೆಗೊಂಡಿದ್ದು, ದರ್ಶನ್ ಅವರ ಬಹು ಎತ್ತರದ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಹೆಲಿಕಾಪ್ಟರ್ ಮೂಲಕ ಪುಷ್ಪಾಭಿಷೇಕ ನಡೆದಿದ್ದು, ಹೆಲಿಕಾಪ್ಟರ್ ನಿಂದ ಹೂವಿನ ಸುರಿಮಳೆ ಬೀಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು.

ದರ್ಶನ್ ಗೆ ಹೊಸಕೋಟೆಯಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದ್ದು, ವರಲಕ್ಷ್ಮಿ ಹಬ್ಬಕ್ಕಿಂತ ಮಿಗಿಲಾಗಿ ಕುರುಕ್ಷೇತ್ರದ ಬಿಡುಗಡೆಯನ್ನು ಆನಂದಿಸುತ್ತಿದ್ದಾರೆ.

ಇಡೀ ಚಿತ್ರಮಂದಿರ ಕಾಣದಂತೆ ಫ್ಲೆಕ್ಸ್ ಗಳು ತುಂಬಿದ್ದು, 43 ಅಡಿಯ 'ಕೌರವ'ನ ಕಟೌಟ್ ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರು. ಚಿತ್ರಮಂದಿರದ ಎದುರಿನ ಸರ್ವೀಸ್ ರಸ್ತೆಯ ತುಂಬೆಲ್ಲ ಅಭಿಮಾನಿಗಳು ನೆರೆದಿದ್ದರು.

Post Comments (+)