‘ತ್ರಯ’ದಲ್ಲಿ ಮರ್ಡರ್‌ ಮಿಸ್ಟರಿ

ಗುರುವಾರ , ಏಪ್ರಿಲ್ 25, 2019
33 °C

‘ತ್ರಯ’ದಲ್ಲಿ ಮರ್ಡರ್‌ ಮಿಸ್ಟರಿ

Published:
Updated:
Prajavani

ಕೊಲೆ ಪ್ರಕರಣದ ಸುತ್ತಲಿನ ನಿಗೂಢತೆಯ ಕಥಾಹಂದರದ ಸಿನಿಮಾ ‘ತ್ರಯ’. ಇದರ ಹಾಡುಗಳ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಿತು.

ಇದರ ನಿರ್ದೇಶನ ಕೃಷ್ಣಸಾಯಿ ಅವರದ್ದು. ಇವರು ತಮಿಳಿನವರು. ಭಾಷೆಯ ತೊಂದರೆ ಎದುರಿಸದೆಯೇ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಕೊಂಡಿದೆ ಚಿತ್ರತಂಡ.

‘ತಮಿಳಿನಲ್ಲಿ‌ ಮೂರು ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲಿ ಇದೇ ಮೊದಲ ನಿರ್ದೇಶನ’ ಎಂದು ಮಾತಿಗೆ ಇಳಿದರು ಕೃಷ್ಣಸಾಯಿ.

‘ಈ ಚಿತ್ರದಲ್ಲಿ ಹೀಗೆ ಆಗುತ್ತದೆ ಎಂದು ವೀಕ್ಷಕರಿಗೆ ಊಹಿಸಲು ಸುಲಭವಲ್ಲ. ಕನ್ನಡದಲ್ಲಿ ಕೆಲಸ ಮಾಡಿದ್ದು ಖುಷಿ ತಂದಿದೆ. ಚಿತ್ರದ ಹಾಡುಗಳು ಚೆನ್ನಾಗಿ ಬಂದಿವೆ’ ಎಂದರು. ನಟ ಮನ್‌ದೀಪ್ ರಾಯ್ ಅವರು ಈ ಚಿತ್ರದಲ್ಲಿ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಆಗಿ ನಟಿಸಿದ್ದಾರೆ. ‘ಸಿನಿಮಾ ರಂಗದಲ್ಲಿ ನಾನು ಈಗ ನಲವತ್ತನೆಯ ವರ್ಷ ಸವೆಸುತ್ತಿದ್ದೇನೆ. ಎಂಟುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ನನಗೆ ಚಿತ್ರದಲ್ಲಿ ಎಲ್ಲರೂ ಹಿಂಸೆ‌ ಕೊಟ್ಟಿದ್ದಾರೆ! ಮೂರೂ ಜನರಿಗೆ (ಮದನ್, ಅಮೋಘ್ ಮತ್ತು ಶಂಕರ್) ಸಿನಿಮಾದಲ್ಲಿ‌ ನಾನು ಕಪಾಳಕ್ಕೆ ಹೊಡೆದಿದ್ದೇನೆ‌’ ಎಂದರು ನಟಿ ರಜನಿ. ‘ಕಪಾಳಮೋಕ್ಷದ ದೃಶ್ಯಕ್ಕೆ ಐದು ಬಾರಿ ಟೇಕ್‌ ತಗೊಂಡಿದ್ದರು ರಜನಿ’ ಎಂದು ದೂರಿದರು ನಟ ಅಮೋಘ್. ಅಂದಹಾಗೆ, ಅಮೋಘ್ ಅವರದ್ದು ಸಿನಿಮಾದಲ್ಲಿ ಪ್ಲೇಬಾಯ್ ‍ಪಾತ್ರ. ‘ಅಪ್ಪನ ಹತ್ತಿರ ಹೇರಳ ದುಡ್ಡಿದೆ. ಖರ್ಚು ಮಾಡುವುದು ಹೇಗೆ ಎಂಬುದು ಗೊತ್ತಾಗದ ಮಗನ ಪಾತ್ರ ನಂದು’ ಎಂದರು.

ಶಂಕರ್ ಅವರದ್ದೂ ಅಂಥದ್ದೆ ಒಂದು ಪಾತ್ರ. ‘ನನಗೆ ಹೇಳಿಕೊಳ್ಳುವ ಕೆಲಸ ಇಲ್ಲ. ಅಪ್ಪನ ಹತ್ತಿರವಿರುವ ಹಣವನ್ನು ಖರ್ಚು ಮಾಡಲು ಪಾರ್ಟಿ ಮಾಡಿಕೊಂಡಿರುತ್ತೇನೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !