ಮೈಸೂರು: ‘ಡಾ.ರಾಜಕುಮಾರ್ ನನ್ನನ್ನು ಸೇರಿದಂತೆ ಕನ್ನಡದ ಅಸಂಖ್ಯಾತ ಕಲಾವಿದರನ್ನು ಹರಸಿ, ಬೆಳೆಸಿದ ಚೇತನ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಸ್ಮರಿಸಿದರು.

ನಗರದ ಅರುಣರಾಗ ಕ್ರಿಯೇಷನ್ಸ್ ವತಿಯಿಂದ ಡಾ.ರಾಜಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ವಿಶ್ವೇಶ್ವರ ನಗರದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಭಾಂಗಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ‘ರಾಜ್ ಸಂಗಮ, ಗಿರಿಕನ್ಯೆ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಗಳೂರಿನಲ್ಲಿ ಹುಟ್ಟಿ, ಚಿಕ್ಕಮಗಳೂರಿನಲ್ಲಿ ಬೆಳೆದ 16 ವರ್ಷದ ನನ್ನನ್ನು ಅಂದು ಗುರುತಿಸಿ, ‘ಗಿರಿಕನ್ಯೆ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡದಿದ್ದರೆ ನಾನು ಇಲ್ಲಿಯವರೆಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರೊಂದಿಗೆ ಏಳು ಚಿತ್ರಗಳಲ್ಲಿ ಅಭಿನಯಿಸಿದ ನಾನೇ ಭಾಗ್ಯವಂತೆ’ ಎಂದರು.

ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಕಾರ್ಯದರ್ಶಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ ವಿ. ಬೈರಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ. ಶೋಭಾ, ಗೋಲ್ಡನ್ ಸುರೇಶ್, ಎಡೆಯೂರು ಸಮೀವುಲ್ಲಾ ಪಾಲ್ಗೊಂಡರು.

ಗಾಯನ: ರಾಜಕುಮಾರ್, ಪುನೀತ್ ರಾಜ್ಕುಮಾರ್ ಹಾಗೂ ಜಯಮಾಲಾ ಅಭಿನಯಿಸಿರುವ ಚಿತ್ರಗಳ ಗೀತೆಗಳನ್ನು ಡಾ.ರೇಖಾ ಅರುಣ್, ಗುರುರಾಜ್, ಜಗದೀಶ್, ಸೋಮಶೇಖರ್ ಮನ್ಮೋಹನ್ರಾಜ್, ಗಣೇಶ್, ಸುಧೀಂದ್ರ, ನಾದಮಯ ಪ್ರೇಮ್, ವಿನಯ್, ವಾದಿರಾಜ್, ನಾರಾಯಣಸ್ವಾಮಿ, ಪ್ರಿಯಾ, ಅಪೂರ್ವ ನಾರಾಯಣಸ್ವಾಮಿ, ಶಾಂತಕುಮಾರಿ, ಗೀತಾ ಶ್ರೀಧರ್, ಜಗದೀಶ್,ಪ್ರಣಿತಾ ಪ್ರಭಾಕರ್, ರತ್ನಾ ಲೋಕೇಶ್, ಉಮಾ, ಚೇತನ್ ಗೌಡ, ಸೋಮಶೇಖರ್, ರಂಗಸ್ವಾಮಿ, ರಾಜು, ರೂಪ್ ಕುಮಾರ್, ಸುದರ್ಶನ್, ಸುಂದರೇಶ್, ವಿನಯ್ ಮೊದಲಾದವರು ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-39-1900960216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.