ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ನಫೀಸಾ ಅಲಿಗೂ ಕ್ಯಾನ್ಸರ್!

Last Updated 21 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಖ್ಯಾತ ಸಿನಿಮಾ ಮತ್ತು ರಂಗನಟಿ ನಫೀಸಾ ಅಲಿ ತಮಗೂ ಅಂಡಾಶಯದ ಕ್ಯಾನ್ಸರ್‌ ಇರುವುದಾಗಿ ಹೇಳಿ ಕೊಂಡಿದ್ದಾರೆ. ತಮಗಿರುವ ಕ್ಯಾನ್ಸರ್‌ ಮೂರನೇ ಹಂತ ತಲುಪಿರುವುದು ಖಾತರಿಯಾದ ನಂತರ ಅವರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿ ಕೊಂಡಿದ್ದಾರೆ.

‘ಹುಟ್ಟುಹಬ್ಬದ ಶುಭಾಶಯ ಪಿಯಾ. ನನ್ನ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆನನ್ನ ಮಕ್ಕಳೇ ಕಾರಣ’ ಎಂದು ನಫೀಸಾ ಅಲಿ ಅವರು ಭಾನುವಾರ ಮಗಳಿಗೆ ಸಂದೇಶ ಕಳುಹಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಜನಿಸಿದ ನಫೀಸಾ ಅವರು 1979 ರಲ್ಲಿ ಶಶಿ ಕಪೂರ್ ಅವರ ‘ಜುನೂನ್’ ಚಿತ್ರದಲ್ಲಿ ಮೊದಲು ಅಭಿನಯಿಸಿದರು. ಆ ನಂತರ ಮೇಜರ್ ಸಾಬ್, ಲೈಫ್ ಇನ್ ಎ ಮೆಟ್ರೊ, ಯಮಲಾ ಪಾಗ್ಲಾ ದಿವಾನಾ ಮತ್ತು ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್‌ 3 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಫೀಸಾ ಪ್ರಸ್ತುತ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಅವರು 2009ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಕರ್ನಲ್ ಆರ್. ಎಸ್. ಸೋಧಿ ಅವರನ್ನು ವಿವಾಹವಾದ ಇವರಿಗೆ ಅಜಿತ್ ಮತ್ತು ಅರ್ಮನ್, ಪಿಯಾ ಹೆಸರಿನ ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT