ಬೆಂಗಳೂರು: ಹೈಪ್ರೊಫೈಲ್ ಡಿವೋರ್ಸ್ ಕೇಸುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ನಾಗ ಚೈತನ್ಯ–ಸಮಂತಾ ಅವರದ್ದು.

ಸದ್ಯ ಈ ಜೋಡಿ ಕಾನೂನು ಪ್ರಕಾರ ವಿಚ್ಛೇದನ ಪಡೆದು ತಮ್ಮ ಹೊಸ ಸಂಗಾತಿಗಳ ಜೊತೆ ಖುಷಿಯಾಗಿ ಸಂಸಾರ ನಡೆಸುತ್ತಿದ್ದಾರೆ.

ಏತನ್ಮಧ್ಯೆ ನಾಗ ಚೈತನ್ಯ ತಮ್ಮ ಹೊಸ ಪತ್ನಿ ಶೋಭಿತಾ ಧುಲಿಪಾಲಾ ಜೊತೆ ಹಾಗೂ ಸಮಂತಾ ತಮ್ಮ ಹೊಸ ಗಂಡ ರಾಜ್ ನಿಧಿಮೋರ್ ಅವರ ಜೊತೆ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಎದುರುಗೊಂಡಿದ್ದಾರೆ.

ಪ್ರತ್ಯೇಕವಾದ ನಂತರ ನಾಗಚೈತನ್ಯ–ಸಮಂತಾ ಯಾವುದೇ ವೇದಿಕೆಯಲ್ಲಿ, ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೇ 2 ರಂದು ಶನಿವಾರ ಹೈದರಾಬಾದ್ನಲ್ಲಿ ನಡೆದ ನಿರ್ಮಾಪಕ ಸುನೀಲ್ ನಾರಂಗ್ ಅವರ ಮಗಳು ಸಿಮ್ರನ್ ನಾರಂಗ್ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದೇ ಕಾರ್ಯಕ್ರಮದಲ್ಲಿ ಈ ಜೋಡಿಗಳು ಕಾಣಿಸಿಕೊಂಡಿದ್ದು ಅಭಿಮಾನಿಗಳ ಆಶ್ಚರ್ಯಕ್ಕ ಕಾರಣವಾಗಿದೆ.

2011 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅವರು ಪರಸ್ಪರ ದೂರವಾಗಿದ್ದರು. ಸಮಂತಾ 2025 ರಲ್ಲಿ ನಿರ್ಮಾಪಕ ರಾಜ್ ನಿಧಿಮೋರು ಅವರ ಕೈಹಿಡಿದಿದ್ದರೆ, ನಾಗ ಚೈತನ್ಯ 2024 ರಲ್ಲಿ ನಟಿ ಶೋಭಿತಾ ಧುಲಿಪಾಲಾ ಅವರನ್ನು ಮದುವೆಯಾಗಿದ್ದರು.
.ಹೊಸ ಕಾರು ಖರೀದಿಸಿದ ನಟ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ.ಸಮಂತಾ ಜತೆ ಎರಡನೇ ವಿವಾಹ: ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.