ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯಾರ ಹೆಸರಿನ ಗುಟ್ಟು ಗೊತ್ತಾ?

Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

ನಟಿ ಕಿಯಾರ ಅಡ್ವಾಣಿ ನಿಜ ಹೆಸರು ಆಲಿಯಾ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅವರು ಬಾಲಿವುಡ್‌ಗೆ ಪಾದರ್ಪಣೆ ಮಾಡುವಾಗ ಯಾಕೆ ಕಿಯಾರ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಂಡರು ಎಂಬ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.

ಈಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ, ಆ ಹೆಸರಿನ ಆಯ್ಕೆಯ ಹಿಂದಿನ ಪ್ರೇರಣೆ ಏನು ಎಂದು ಹೇಳಿಕೊಂಡಿದ್ದಾರೆ.

‘2014ರಲ್ಲಿ ಬಾಲಿವುಡ್‌ಗೆ ಪ್ರವೇಶಿಸಿದಾಗ ನನ್ನ ಹೆಸರನ್ನು ಕಿಯಾರ ಎಂದು ಬದಲಾಯಿಸಿಕೊಂಡೆ. ಕಾರಣ ಬಾಲಿವುಡ್‌ನಲ್ಲಿ ಒಬ್ಬ ಆಲಿಯಾ ಇದ್ದಾರೆ. ಇನ್ನೊಬ್ಬ ಆಲಿಯಾ ಇದ್ದರೆ ಎಲ್ಲರಿಗೂ ಗೊಂದಲವಾಗುತ್ತದೆ. ಹೀಗಾಗಿ ನನ್ನದೇ ಐಡೆಂಟಿಟಿಗಾಗಿ ಹೆಸರು ಬದಲಾಯಿಸಿಕೊಂಡೆ. ಕಿಯಾರ ಹೆಸರನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಿಯಾಂಕಾ ಚೋಪ್ರಾ ಅವರ ‘ಅಂಜಾನಾ ಅಂಜಾನಿ’ ಸಿನಿಮಾ ಕಾರಣ. ಅದರಲ್ಲಿ ಪ್ರಿಯಾಂಕಾ ತಮ್ಮನ್ನು ‘ಹಾಯ್‌ ಐ ಯಾಮ್‌ ಕಿಯಾರ’ ಎಂದು ಪರಿಚಯಿಸಿಕೊಳ್ಳುವ ದೃಶ್ಯವಿದೆ. ಆಗ ನನಗನಿಸಿತ್ತು ಎಂತಹ ಚಂದದ ಹೆಸರು? ನನಗೆ ಮಗಳು ಹುಟ್ಟಿದರೆನಾನು ಅವಳನ್ನು ಅದೇ ಹೆಸರಿನಿಂದ ಕರೆಯಬೇಕು. ಆದರೆ ಅದಕ್ಕಿಂತ ಮೊದಲು ಹೆಸರು ಬದಲಾಯಿಸಿಕೊಳ್ಳುವ ಅವಕಾಶ ನನಗೇ ಸಿಕ್ಕಿತು. ಹಾಗಾಗಿ ನನಗೆ ನಾನೇ ಆ ಹೆಸರು ಇಟ್ಟುಕೊಂಡೆ’ ಎಂದಿದ್ದಾರೆ.

ಇನ್ನು ಹೆಸರು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಿದವರು ನಟ ಸಲ್ಮಾನ್‌ ಖಾನ್‌ ಅಂತೆ. ‘ಆದರೆ ಹೆಸರು ಆಯ್ಕೆ ಮಾಡಿಕೊಂಡಿದ್ದು ನಾನೇ. ಈಗ ನನ್ನ ಅಪ್ಪ– ಅಮ್ಮ ಸಹ ಕಿಯಾರ ಹೆಸರಿನಿಂದಲೇ ಕರೆಯುತ್ತಾರೆ’ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಾಯಕ ನಟನಾಗಿ ನಟಿಸಿರುವ ‘ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಕಿಯಾರಗೆ ಹೆಸರು ತಂದುಕೊಟ್ಟಿತ್ತು. ಇತ್ತೀಚೆಗೆ ನಾಯಕಿಯಾಗಿ ನಟಿಸಿರುವ ‘ಕಬೀರ್‌ ಸಿಂಗ್‌’ 2019ರ ಅತಿ ಹೆಚ್ಚು ಗಳಿಕೆ ಮಾಡಿರುವ ಹಿಂದಿ ಸಿನಿಮಾಗಳ ಸಾಲಿಗೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT