ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಷನ್, ಹಾರರ್‌ ಚಿತ್ರದಲ್ಲಿ ‘ಜಿಂಕೆಮರಿ’

Last Updated 29 ಅಕ್ಟೋಬರ್ 2019, 4:56 IST
ಅಕ್ಷರ ಗಾತ್ರ

ನಾಯಕಿಯೇ ಪ್ರಧಾನವಾಗಿರುವ ಚಿತ್ರಗಳು ಆಗೊಮ್ಮೆ, ಈಗೊಮ್ಮೆ ಬಿಡುಗಡೆಯಾಗುತ್ತಿರುತ್ತವೆ. ಕನ್ನಡದ ನಂದ ಲವ್ಸ್ ನಂದಿತಾ ಚಿತ್ರದ ‘ಜಿಂಕೆಮರಿನಾ’ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ನಟಿ ನಂದಿತಾ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ‘ಐಪಿಸಿ 376’ ಚಿತ್ರದಲ್ಲಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್‌ಕುಮಾರ್ ಸುಬ್ಬರಾಯನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

‘ಐಪಿಸಿ 376 ಸಿನಿಮಾ ಮೂಲಕ ನಂದಿತಾ ವೃತ್ತಿ ಜೀವನಕ್ಕೆ ಹೊಸ ತಿರುವು ಸಿಗಲಿದೆ. ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಕೆಲವು ಸಾಹಸ ಸನ್ನಿವೇಶಗಳಲ್ಲಿ ಡೂಪ್‌ ಇಲ್ಲದೇ ನಟಿಸಿದ್ದಾರೆ’ ಎಂದು ಸುಬ್ಬರಾಯನ್ ತಿಳಿಸಿದ್ದಾರೆ.

‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡುವುದು ಈ ಚಿತ್ರದ ಕಥಾವಸ್ತುವಾಗಿದೆ. ಕಾರ್‌ ಚೇಸಿಂಗ್, ಸಸ್ಪೆನ್ಸ್ ಮತ್ತು ಆ್ಯಕ್ಷನ್ ಸೀನ್‌ಗಳಲ್ಲಿ ಹೊಸತನವನ್ನು ಈ ಚಿತ್ರದ ಮೂಲಕ ತೋರಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT