ಆರ್ಯನ್ ತೇಜಸ್ ನಟಿಸಿ, ನಿರ್ದೇಶಿಸಿರುವ ‘ನಾನು ಕರುಣಾಕರ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅಪ್ಪ–ಮಗನ ಬಾಂಧವ್ಯದ ಕಥೆ ಹೊಂದಿರುವ ಚಿತ್ರ ಏ.3ರಂದು ತೆರೆಗೆ ಬರಲಿದೆ.

‘ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಈ ಹಿಂದೆ ‘ಪಾರ್ಕ್ ರೋಡ್ 100 ರೂಪಾಯಿ’ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೆ ಚಿತ್ರ. ಪ್ರತಿಯೊಬ್ಬರ ಜೀವನಕ್ಕೂ ಬೆಸೆದುಕೊಳ್ಳುವಂಥ ಕಥೆಯಿದೆ. ಅಪ್ಪ ಮಗನ ಬಾಂಧವ್ಯದ ಜತೆಗೆ ಗಂಡ ಹೆಂಡತಿಯ ಸಂಬಂಧದ ಸುತ್ತ ಕಥೆ ಸಾಗುತ್ತದೆ. ಸಂಪೂರ್ಣ ಕೌಟುಂಬಿಕ ಕಥಾಹಂದರ ಹೊಂದಿರುವ ಹಾಸ್ಯಮಯ ಚಿತ್ರ’ ಎಂದರು ನಿರ್ದೇಶಕ.

ನಮನ್ ನಾರಾಯಣ್, ವೈಭವ್ ಸುರೇಶ್ ಬಂಡವಾಳ ಹೂಡಿದ್ದಾರೆ. ರಾಧಾ ಭಗವತಿ ಚಿತ್ರದ ನಾಯಕಿ. ಮಾಸ್ಟರ್ ಭವೀಶ್, ಕರಿಸುಬ್ಬು, ಎಂ.ಕೆ. ಮಠ, ಬಿ.ಎಂ. ವೆಂಕಟೇಶ ಮುಂತಾದವರು ಚಿತ್ರದಲ್ಲಿದ್ದಾರೆ. ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-51-1811741170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.