ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾತಿಚರಾಮಿ ಸಿನಿಮಾ ನೋಡದಂತೆ ಅಪಪ್ರಚಾರ; ನಿರ್ದೇಶಕ ಮಂಸೋರೆ ಆತಂಕ

Last Updated 2 ಜನವರಿ 2019, 7:06 IST
ಅಕ್ಷರ ಗಾತ್ರ

ಬೆಂಗಳೂರು:‘ಸಿನಿಮಾದಲ್ಲಿನ ಒಬ್ಬ ವ್ಯಕ್ತಿಯನ್ನು ಕೇಂದ್ರಕರಿಸಿಕೊಂಡು ಸಿನಿಮಾ ವೀಕ್ಷಿಸದಂತೆ ಪ್ರೇಕ್ಷಕರನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಿನಿಮಾಕುರಿತು ಅಪಪ್ರಚಾರ ನಡೆಯುತ್ತಿದೆ’ ಎಂದು ನಿರ್ದೇಶಕ ಮಂಸೋರೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿನಿಮಾದ ಬಗ್ಗೆ ಎಲ್ಲ ವಲಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾದಲ್ಲಿ ನಟಿಸಿರುವಒಬ್ಬ ವ್ಯಕ್ತಿಯ ಮೇಲಿನ ವೈಯಕ್ತಿಕ ವಿಚಾರವನ್ನೇ ದೊಡ್ಡದಾಗಿಸಿಕೊಂಡುಇಡೀ ತಂಡದ ಶ್ರಮ ವ್ಯರ್ಥವಾಗುವಂತೆ ಮಾಡಲಾಗುತ್ತಿದೆ. ಇದುಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಮಂಸೋರೆ ಮನದಮಾತಿನ ಅಕ್ಷರರೂಪ ಇಲ್ಲಿದೆ...

‘ನಾತಿಚರಾಮಿ ಒಂದು ಪ್ರಯೋಗಾತ್ಮಕ ಸಿನಿಮಾ. ಇದು ಒಬ್ಬ ವ್ಯಕ್ತಿಯ ಶ್ರಮವಲ್ಲ. ಇದು ನನ್ನ ಕನಸು. ಇದನ್ನು ಬೇರೆಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಚಿತ್ರಿಸಲಾಗಿದೆ. ಇದರ ಹಿಂದೆ ಹಗಲು ರಾತ್ರಿ ಎನ್ನದೇ ಒಂದಿಡೀ ವರ್ಷದುಡಿದ ತಂಡದ ಶ್ರಮವಿದೆ. ಇದನ್ನು ಕೊಲ್ಲಬೇಡಿ. ನಿಮಗೆ ಯಾವುದೇ ಅನುಮಾನವಿದ್ದಲ್ಲಿ ನನ್ನ ಬಳಿ ಬನ್ನಿ. ಸಿನಿಮಾ ಚಿತ್ರೀಕರಣದ ವಿಡಿಯೊ ತುಣುಕುಗಳನ್ನು ತೋರಿಸುತ್ತೇನೆ.

‘ನಾವು ಸಿನಿಮಾವನ್ನೇ ಬದುಕಾಗಿಸಿಕೊಂಡಿರುವವರು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಬೇಕಿಲ್ಲ, ಅದರೆಸಿನಿಮಾಗೆ ಹೂಡಿರುವ ಬಂಡವಾಳ ಬಂದರೆ ಅಷ್ಟೇ ಸಾಕು.ಚಂದನವನದಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಸಿನಿಮಾದ ಬಗ್ಗೆ ಹೆಮ್ಮೆ ಇಲ್ಲವೇ? ಒಬ್ಬ ವ್ಯಕ್ತಿಯನ್ನು ಕೇಂದ್ರಿಕರಿಸಿಕೊಂಡು ಇಡೀ ತಂಡದ ಶ್ರಮವನ್ನು ಯಾಕೆ ಹಾಳುಗೆಡವುತ್ತಿದ್ದೀರಾ? ಒಬ್ಬ ವ್ಯಕ್ತಿಗೋಸ್ಕರ ಇಡೀ ತಂಡದ ಶ್ರಮ ವ್ಯರ್ಥವಾಗಬೇಕೆ?’

ನಿರ್ಮಾಪಕರ ಬಗ್ಗೆ ಕಾಳಜಿ
ಪ್ರಯೋಗಾತ್ಮಕ ಸಿನಿಮಾಗಳಿಗೆ ಬಂಡವಾಳ ಹೂಡುವ ನಿರ್ಮಾಪಕರು ನಮ್ಮಲ್ಲಿ ತೀರಾ ವಿರಳ. ಇಂತಹ ಸಂದರ್ಭದಲ್ಲಿ ಬಹಳ ನಂಬಿಕೆಯಿರಿಸಿ, ನಮ್ಮ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಅಲ್ಲದೇ ಇಂತಹ ಲಕೃತ್ಯಗಳಿಂದ ಪ್ರಯೋಗಾತ್ಮಕ ಸಿನಿಮಾಗಳಿಗೆ ಹಣ ಹೂಡಲು ನಿರ್ಮಾಪಕರು ಹಿಂದಡಿ ಇಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

ನಾತಿಚರಾಮಿ ಸಿನಿಮಾ ಡಿ.28ರಂದು ತೆರೆಕಂಡಿತು. ಇದರಲ್ಲಿ ನಟ ಸಂಚಾರಿ ವಿಜಯ್, ನಟಿ ಶ್ರುತಿ ಹರಿಹರನ್, ಗಾಯಕಿ ಶರಣ್ಯ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT