ಮಂಗಳವಾರ, ಆಗಸ್ಟ್ 3, 2021
27 °C

ನಟಿ ನವ್ಯಾಸ್ವಾಮಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿರುತೆರೆ ನಟಿ ನವ್ಯ ಸ್ವಾಮಿ ಅವರಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 

‘ನನಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಕೂಡಲೇ ಐಸೋಲೇಷನ್‌ಗೆ ಒಳಗಾದೆ. ನಾನು ವೈದ್ಯರನ್ನು ಸಂಪರ್ಕಿಸಿ, ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಂಡೆ. ಯೋಗ ಮಾಡುತ್ತಿದ್ದೇನೆ. ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಪೌಷ್ಟಿಕಾಂಶ ಆಹಾರವನ್ನು ಸೇವಿಸುತ್ತಿದ್ದೇನೆ. ಕಳೆದ ಎರಡು ವಾರಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ನಕಾರಾತ್ಮಕ ವಿಷಯಗಳಿಂದ ದೂರ ಇರಿ. ಗಾಳಿಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ತುಣಕಿನ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ನವ್ಯಾ ಸ್ವಾಮಿ ಮೈಸೂರಿನವರು. ಖ್ಯಾತ ನಟಿ ರಕ್ಷಿತಾ ನಡೆಸಿಕೊಡುತ್ತಿದ್ದ ‘ಸ್ವಯಂವರ’ ರಿಯಾಲಿಟಿ ಷೊ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟ ನವ್ಯಾಗೆ ಹೆಸರು ತಂದುಕೊಟ್ಟಿದ್ದು ‘ಲಕುಮಿ’ ಧಾರಾವಾಹಿ. ಮಹಿಳಾ ಸಬಲೀಕರಣ ವಿಷಯವನ್ನು ಆಧರಿಸಿದ ಈ  ಧಾರಾವಾಹಿಯಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದರು. 

ಕೆಲವರ್ಷಗಳಿಂದ ಕನ್ನಡ ಕಿರುತೆರೆಯಿಂದ ದೂರವಾಗಿದ್ದ ಅವರು, ತೆಲುಗು ಹಾಗೂ ತಮಿಳು ಭಾಷೆಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ಈಟಿವಿ ಪ್ರಸಾರವಾಗುತ್ತಿದ್ದ ‘ನಾ ಪೇರು ಮೀನಾಕ್ಷಿ’ ಮೂಲಕ ಅವರು ಮನೆಮಾತಾಗಿದ್ದಾರೆ. ಇತ್ತೀಚೆಗೆ ಅವರು ಹೈದಾರಾಬಾದ್‌ನಲ್ಲಿ ಧಾರಾವಾಹಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಕೊರೊನಾ ಸೋಂಕು ತಗುಲಿರುವುದು‌ ದೃಢಪಟ್ಟಿರುವುದರಿಂದ ಮನೆಯಲ್ಲೇ ಐಸೊಲೇಷನ್‌ಗೆ ಒಳಗಾಗಿದ್ದಾರೆ. ‘ತಲೆನೋವು ಇತ್ತು. ಬೇರೆ ಯಾವ ಲಕ್ಷಣಗಳೂ ಇರಲಿಲ್ಲ. ಈಗಲೂ ನಾನು ಆರಾಮವಾಗಿದ್ದೇನೆ’ ಎಂದು ನವ್ಯಾ ಹೇಳಿದ್ದಾರೆ. 

ಅವರ ಜೊತೆ ನಟಿಸುತ್ತಿದ್ದ ಸಹನಟರು, ಧಾರಾವಾಹಿ ತಂಡದ ಸದಸ್ಯರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು