ನವಾಜುದ್ದೀನ್ ಈಗ ‘ಸೀರಿಯಸ್ ಮ್ಯಾನ್’

ಮಂಗಳವಾರ, ಜೂನ್ 25, 2019
22 °C
ಹೊಸ ವೆಬ್ ಸೀರಿಸ್

ನವಾಜುದ್ದೀನ್ ಈಗ ‘ಸೀರಿಯಸ್ ಮ್ಯಾನ್’

Published:
Updated:
Prajavani

2018 ನಟ ನವಾಜುದ್ದೀನ್ ಸಿದ್ಧಿಕಿ ಪಾಲಿಗೆ ಅದೃಷ್ಟವೆಂದೇ ಹೇಳಬಹುದು.

‘ಸೆಕ್ರೆಡ್ ಗೇಮ್ಸ್‌’ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಗಣೇಶ್ ಗಾಯ್‌ತೊಂಡೆ ಪಾತ್ರದಲ್ಲಿ ನವಾಜುದ್ದೀನ್ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಅದೇ ಮೋಡಿ ಈಗ ನವಾಜುದ್ದೀನ್‌ಗೆ ಹೊಸ ವೆಬ್‌ಸರಣಿಯಲ್ಲಿ ನಟಿಸಲು ಅವಕಾಶ ದಕ್ಕಿಸಿಕೊಟ್ಟಿದೆ.

‘ಸೀರಿಯಸ್ ಮ್ಯಾನ್’ ಹೆಸರಿನ ಹೊಸ ವೆಬ್‌ಸರಣಿಯಲ್ಲಿ ನವಾಜುದ್ದೀನ್ ಕೊಳೆಗೇರಿ ನಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೆಬ್‌ಸರಣಿಯು ಮನು ಜೋಸೆಫ್ ಅವರ ‘ಸೀರಿಯಸ್ ಮ್ಯಾನ್’ ಅನ್ನುವ ಜನಪ್ರಿಯ ಕಾದಂಬರಿ ಆಧರಿಸಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸುಧೀರ್ ಮಿಶ್ರಾ ಈ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.  ಅಯ್ಯನ್ ಮಣಿ ಹೆಸರಿನ ಕೊಳೆಗೇರಿ ನಿವಾಸಿ ಪಾತ್ರದಲ್ಲಿ ನವಾಜುದ್ದೀನ್ ನಟಿಸುತ್ತಿದ್ದು, ತನ್ನ ಹತ್ತು ವರ್ಷದ ಮಗ ಅತ್ಯಂತ ಪ್ರತಿಭಾವಂತ ಎಂದು ನಂಬುವ ತಂದೆ ಪಾತ್ರ ಇದಾಗಿದೆ.

ಈ ವೆಬ್‌ಸರಣಿಯಲ್ಲಿ ಕೊಳೆಗೇರಿ ನಿವಾಸಿಗಳ ಬದುಕು ಅನಾವರಣಗೊಂಡಿದ್ದು, ಬಡತನದ ಜೊತೆಗೆ ಜಾತಿ ಮತ್ತು ವರ್ಗ ಸಂಘರ್ಷದ ಕಥೆಯೂ ಅಡಗಿದೆ. ಈ ವೆಬ್ ಸರಣಿಯ ಬಿಡುಗಡೆಯ ದಿನಾಂಕ ಇನ್ನೂ ಘೋಷಿಸಿಲ್ಲ.

ನವಾಜುದ್ದೀನ್ ಅವರ ‘ಫೋಟೊಗ್ರಾಫರ್’ ಸಿನಿಮಾ ಈಚೆಗಷ್ಟೇ ಬಿಡುಗಡೆ ಕಂಡಿತ್ತು. ಸದ್ಯಕ್ಕೆ ನವಾಜ್ ಕೈಯಲ್ಲಿ  ‘ಬೋಲೆ ಚೂಂಡಿಯಾ’, ‘ರಾತ್ ಅಖೇಲಿ ಹೈ’ ಸಿನಿಮಾಗಳಿವೆ,

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !