ಸೋಮವಾರ, ಸೆಪ್ಟೆಂಬರ್ 23, 2019
28 °C

ತೆಲುಗು ಸಿನಿಮಾ: ‘ಸೈರಾ ನರಸಿಂಹ ರೆಡ್ಡಿ’ ನಯನತಾರಾ ಸಂಭಾವನೆ ₹5 ಕೋಟಿ

Published:
Updated:
Prajavani

ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ಯ ಟೀಸರ್‌ ಬಿಡುಗಡೆಗೊಂಡಿದ್ದು, ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 2 ನಿಮಿಷದ ಟೀಸರ್‌ನಲ್ಲಿ ಆ್ಯಕ್ಷನ್‌ ದೃಶ್ಯಗಳು, ಸೆಟ್‌ಗಳು, ಯುದ್ಧದ ದೃಶ್ಯಗಳು ಈಗಾಗಲೇ ಅಭಿಮಾನಿಗಳ ಮನ ಗೆದ್ದಿವೆ. 

ಈ ಚಿತ್ರದಲ್ಲಿ ನಟಿ ನಯನತಾರಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಪಾತ್ರಕ್ಕಾಗಿ ಅವರು ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಸಿನಿಮಾ ಮೂಲಗಳು ತಿಳಿಸಿವೆ. ದಕ್ಷಿಣ ಭಾರತದ ಪ್ರಮುಖ ನಾಯಕಿಯರ ಸಾಲಿನಲ್ಲಿ ನಯನತಾರಾ ಹೆಸರು ಮುಂಚೂಣಿಯಲ್ಲಿದೆ. ಮಹಿಳಾ ಪ್ರಧಾನ ಚಿತ್ರಗಳಲ್ಲೂ ನಟಿಸಿರುವ ಅವರ ಸಂಭಾವನೆ ಕಳೆದ ಎರಡು– ಮೂರು ವರ್ಷಗಳಲ್ಲಿ ಹೆಚ್ಚಾಗಿಯೇ ಇದೆ. ಈಗ ತನ್ನ ಯಶಸ್ಸು ಹಾಗೂ ಬೇಡಿಕೆಗೆ ಅನುಗುಣವಾಗಿ ಈ ಚಿತ್ರಕ್ಕೆ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 

‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಚಿರಂಜೀವಿ ಜೋಡಿಯಾಗಿ ನಯನ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರಕ್ಕೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. 

ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಅಕ್ಟೋಬರ್‌ 2ರಂದು ಚಿತ್ರ ತೆರೆಕಾಣಲಿದೆ.

ನಯನತಾರಾ ತಮಿಳಿನಲ್ಲಿ ವಿಜಯ್‌ ಜೊತೆ ‘ಬಿಗಿಲ್‌’ ಹಾಗೂ ರಜನಿಕಾಂತ್‌ ಜೊತೆ ‘ದರ್ಬಾರ್‌’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.  

Post Comments (+)