ಸೋಮವಾರ, ಜನವರಿ 17, 2022
27 °C

36ನೇ ವಸಂತಕ್ಕೆ ಕಾಲಿರಿಸಿದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದ ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಟಿ ನಯನತಾರಾ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಪ‍್ರಿಯಕರ, ನಿರ್ದೇಶಕ ವಿಘ್ನೇಶ್ ಶಿವನ್, ಸಮಂತಾ ಅಕ್ಕಿನೇನಿ, ಐಶ್ವರ್ಯಾ ರಾಜೇಶ್‌ ಹಾಗೂ ಇತರ ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಪ್ರಿಯಕರ ವಿಘ್ನೇಶ್ ‘ಹ್ಯಾಪಿ ಬರ್ತ್‌ಡೇ ಟು ಯೂ ತಂಗಮಯ್ಯಿ, ಈಗ ಇರುವಂತೆಯೇ ಸ್ಫೂರ್ತಿಯಾಗಿ, ಪ್ರೇರಣೆಯಾಗಿ, ಪ್ರಾಮಾಣಿಕ ವ್ಯಕ್ತಿಯಾಗಿ ಇರು. ಮತ್ತು ಇನ್ನೂ ಎತ್ತರಕ್ಕೆ ಏರು. ದೇವರು ನಿನಗೆ ಸದಾ ಖುಷಿಯನ್ನೇ ನೀಡಲಿ. ಯಶಸ್ಸು ಸದಾ ನಿನ್ನ ಪಾಲಿಗಿರಲಿ. ಮುಂದಿನ ವರ್ಷ ನಿನ್ನ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯಲಿ. ಹುಟ್ಟುಹಬ್ಬದ ಶುಭಾಶಯಗಳು ನಯನತಾರಾ’ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

 

ನಟಿ ಐಶ್ವರ್ಯಾ ರಾಜೇಶ್‌ ‘ಹ್ಯಾಪಿ ಬರ್ತಡೇ ನಯನತಾರಾ ಮೇಡಂ, ನೀವು ಸದಾ ಹೊಳೆಯುವ ತಾರೆಯಂತೆ ಮಿನುಗುತ್ತಿರಿ. ನಿಮಗೆ ಯಶಸ್ಸು, ಆರೋಗ್ಯ ಹಾಗೂ ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

 

 

 

 

ಸಮಂತಾ ಅಕ್ಕಿನೇನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಒನ್ ಅಂಡ್ ಓನ್ಲಿ ನಯನತಾರಾ, ಹ್ಯಾಪಿ ಬರ್ತ್‌ಡೇ. ಸದಾ ಹೊಳೆಯುತ್ತಿರು. ನಿನಗೆ ಹೆಚ್ಚು ಶಕ್ತಿ, ಸಾಮರ್ಥ್ಯ ದೊರಕಲಿ ಸಹೋದರಿ, ನಿನ್ನ ಸಾಮರ್ಥ್ಯ ಹಾಗೂ ದೃಢನಿಶ್ಚಯಗಳಿಗೆ ಸೆಲ್ಯೂಟ್‌’ ಎಂದು ಬರೆದುಕೊಂಡಿದ್ದಾರೆ.

 

 

 

 

ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ‘ಹುಟ್ಟುಹಬ್ಬದ ಶುಭಾಶಯಗಳು ಲೇಡಿ ಸೂಪರ್ ಸ್ಟಾರ್‌ ನಯನತಾರಾ, ಈ ವರ್ಷ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಕಾರಾತ್ಮಕ ಕ್ಷಣಗಳೇ ತುಂಬಿರಲಿ’ ಎಂದಿದ್ದಾರೆ.

 

ಸದ್ಯ ನಯನತಾರಾ ಕೈಯಲ್ಲಿ ತಮಿಳಿನ ನೇತ್ರಿಕಣ್‌ ಹಾಗೂ ಮಲೆಯಾಳಂನ ನಿಝ್ಹಲ್‌ ಸಿನಿಮಾಗಳಿವೆ. ಬಹುಶಃ ಈ ಎರಡೂ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು