ಮಂಗಳವಾರ, ಅಕ್ಟೋಬರ್ 20, 2020
23 °C

‍ಪ್ರಿಯಕರನ ಹುಟ್ಟುಹಬ್ಬಕ್ಕೆ ₹ 25 ಲಕ್ಷ ಖರ್ಚು ಮಾಡಿದ ನಟಿ ನಯನತಾರಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದ ಖ್ಯಾತಿ ನಟಿ ನಯನತಾರಾ ದಕ್ಷಿಣದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತಮ್ಮ ಸಂಭಾವನೆಗೆ ತಕ್ಕ ಹಾಗೆ ಆಡಂಬರದ ಜೀವನಶೈಲಿಯನ್ನೂ ರೂಢಿಸಿಕೊಂಡಿದ್ದಾರೆ ಈ ನಟಿ. ಪ್ರವಾಸ ಮಾಡುವುದು ಇವರ ನೆಚ್ಚಿನ ಹವ್ಯಾಸ. ಈಕೆ ಇತ್ತೀಚೆಗೆ ತಮ್ಮ ಪ್ರಿಯಕರ ವಿಘ್ನೇಶ್ ಶಿವನ್‌ ಜೊತೆ ಗೋವಾದಲ್ಲಿ ಕಾಣಿಸಿಕೊಂಡಿದ್ದರು.

ಅದರಲ್ಲೇನು ವಿಶೇಷ ಎನ್ನುತ್ತೀರಾ? ಮೂರು ದಿನದ ಗೋವಾ ಟ್ರಿಪ್‌ಗೆ ಆಕೆ ಖರ್ಚು ಮಾಡಿದ್ದು ಬರೋಬ್ಬರಿ ₹25 ಲಕ್ಷ. ಸದ್ಯ ಕಾಲಿವುಡ್‌ನಲ್ಲಿ ಇದು ಬಿಸಿಸುದ್ದಿಯಾಗಿದೆ. ತಮ್ಮ ಪ್ರಿಯಕರ ವಿಘ್ನೇಶ್ ಹುಟ್ಟುಹಬ್ಬಕ್ಕೆ ಇಷ್ಟೊಂದು ಹಣ ವ್ಯಯಿಸಿದ್ದಾರೆ ಈ ನಟಿ ಎನ್ನಲಾಗುತ್ತಿದೆ.

ಕಳೆದೆರಡು ವರ್ಷಗಳಿಂದ ಈ ಜೋಡಿ ತಮ್ಮ ಹುಟ್ಟುಹಬ್ಬವನ್ನು ವಿದೇಶಗಳಲ್ಲಿ ಆಚರಿಸಿಕೊಳ್ಳುತ್ತಿತ್ತು. ಆದರೆ ಕೋವಿಡ್‌–19 ಕಾರಣದಿಂದ ವಿಘ್ನೇಶ್‌ 35ನೇ ವರ್ಷದ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿದ್ದಾರೆ ನಯನತಾರಾ.

ವಿಘ್ನೇಶ್‌ ಶಿವನ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಯನಾತಾರಾ ನಟಿಸಿದ್ದು ಸಿನಿಮಾಕ್ಕೆ ಆಕೆ ಹಣ ಹೂಡಿಕೆ ಮಾಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು