ಮಂಗಳವಾರ, ಜನವರಿ 25, 2022
26 °C

ಚೆನ್ನೈನಲ್ಲಿ ಮನೆ ಖರೀದಿಸಿದ ನಟಿ ನಯನತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದ ಬೆಡಗಿ ನಯನತಾರ ಇಲ್ಲಿನ ಪೋಯಸ್‌ ಗಾರ್ಡನ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್‌, ನಟ ಧನುಷ್‌ ಹಾಗೂ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮನೆಯ ಸಮೀಪದಲ್ಲೇ ಈ ಮನೆ ಇದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಪೋಯೆಸ್ ಗಾರ್ಡನ್ ಅತ್ಯಂತ ದುಬಾರಿ ಏರಿಯಾವಾಗಿದೆ. ಇಲ್ಲಿ ಉದ್ಯಮಿಗಳು, ರಾಜಕೀಯ ನಾಯಕರು ಹಾಗೂ ಸಿನಿಮಾ ನಟ, ನಟಿಯರ ಮನೆಗಳು ಕೂಡ ಇಲ್ಲಿವೆ. ಸದ್ಯ ನಯನತಾರ 4 ಬೆಡ್‌ರೂಂ ಇರುವ ಫ್ಲ್ಯಾಟ್‌ ಅನ್ನು ಖರೀದಿ ಮಾಡಿದ್ದಾರೆ. 

ಮುಂದಿನ ದಿನಗಳಲ್ಲಿ ತಮಿಳು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರನ್ನು ಮದುವೆಯಾಗಲಿದ್ದು ಇಲ್ಲಿಯೇ ನೆಲೆಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಹಿಟ್‌ ಆಗಿರುವ 'ಅಣ್ಣಾತ್ತೆ' ಚಿತ್ರದಲ್ಲೂ ರಜನಿಕಾಂತ್‌ಗೆ ನಾಯಕಿಯಾಗಿ ನಯನತಾರ ನಟಿಸಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು