ಮಲಯಾಳಂ ಸಿನಿಮಾದಲ್ಲಿ ನಯನತಾರಾ

ಭಾನುವಾರ, ಜೂಲೈ 21, 2019
27 °C

ಮಲಯಾಳಂ ಸಿನಿಮಾದಲ್ಲಿ ನಯನತಾರಾ

Published:
Updated:

ಖ್ಯಾತ ನಟಿ ನಯನತಾರಾ ಅವರು ಮಲಯಾಳಂ ಭಾಷೆಯ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಧ್ಯಾನ್‌ ಶ್ರೀನಿವಾಸನ್‌ ನಿರ್ದೇಶನದ ‘ಲವ್‌ ಆ್ಯಕ್ಷನ್‌ ಡ್ರಾಮಾ’ ಎಂಬ ಸಿನಿಮಾ ಮೂಲಕ ಅವರು ಮಾಲಿವುಡ್‌ಗೆ ವಾಪಸ್ಸಾಗಿದ್ದು, ಈ ಚಿತ್ರದಲ್ಲಿ ನಾಯಕ ನಿವಿನ್‌ ಪೌಲಿ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ. 

ಚಿತ್ರತಂಡವು ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಇದನ್ನು ಇಬ್ಬರೂ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈ ಚಿತ್ರದಲ್ಲಿ ಶ್ರೀನಿವಾಸನ್‌, ಅಜು ವರ್ಗೀಸ್‌, ಮಲ್ಲಿಕಾ ಸುಕುಮಾರನ್‌, ಬಸಿಲ್‌ ಜೋಸೆಫ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫಂಟಾಸ್ಟಿಕ್‌ ಫಿಲ್ಮ್ಸ್‌ ಬ್ಯಾನರ್‌ನಡಿಯಲ್ಲಿ ಅಜು ವರ್ಗೀಸ್‌ ಹಾಗೂ ವಿಶಾಖ್‌ ಸುಬ್ರಹ್ಮಣ್ಯಂ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

2016ರಲ್ಲಿ ನಟಿಸಿದ ಚಿತ್ರವೇ ನಯನತಾರಾ ಮಾಲಿವುಡ್‌ ನಟಿಸಿದ ಕೊನೆಯ ಚಿತ್ರವಾಗಿತ್ತು. ‘ಪುಥಿಯ ನಿಯಮಮಂ’ ಚಿತ್ರದಲ್ಲಿ ಮಮ್ಮುಟ್ಟಿ ಜೊತೆ ನಟಿಸಿದ್ದರು. ಈ ಚಿತ್ರ ಹೆಚ್ಚು ಹಣ ಗಳಿಸದಿದ್ದರೂ, ಅತ್ಯಾಚಾರಕ್ಕೆ ಒಳಗಾದ ಯುವತಿ ಪಾತ್ರದಲ್ಲಿ ನಟಿಸಿದ್ದ ನಯನತಾರಾ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. 

ಸದ್ಯ ನಯನತಾರಾ ಛಕ್ರಿ ಟಿಲೆಟಿ ನಿರ್ದೇಶನದ ‘ಕೊಲೈಯುಥಿರ್‌ ಕಾಲಂ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ವಿಜಯ್‌ ಅಭಿನಯದ ಬಹುನಿರೀಕ್ಷಿತ ‘ಬಿಗಿಲ್‌’ ಚಿತ್ರದಲ್ಲೂ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Post Comments (+)