ಬಾಲಿವುಡ್ ನಟಿ ನೀನಾ ಗುಪ್ತ ತಮ್ಮ 66ನೇ ವಯಸ್ಸಿನಲ್ಲಿ ಗರ್ಭಿಣಿ ಆಲಿದ್ದಾರೆ ಎಂಬ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೊಗಳ ಕುರಿತು 66 ವರ್ಷದ ನಟಿ ನೀನಾ ಗುಪ್ತ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೈದರಾಬಾದ್ನಲ್ಲಿ ನಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಆರತಕ್ಷತೆಯಲ್ಲಿ ನೀನಾ ಗುಪ್ತಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಹೊಟ್ಟೆ ಸಹಜಕ್ಕಿಂತ ತುಸು ದಪ್ಪವಾಗಿರುವುದನ್ನು ಗಮನಿಸಿ, ಅವರು ಗರ್ಭಧರಿಸಿದ್ದಾರೆ ಎಂಬ ಊಹಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡತೊಡಗಿದವು.

ಈ ಕುರಿತು ಪ್ರತಿಕ್ರಿಯಿಸಿರುವ ನಟಿ ನೀನಾ, ‘ನಾನು ಗರ್ಭಿಣಿಯಲ್ಲ. ಸತ್ಯ ಏನೆಂದರೆ, ನಾನು ಧರಿಸಿದ್ದ ಸೀರೆಯ ಫಿಟಿಂಗ್ಸ್ ಸ್ವಲ್ಪ ದಪ್ಪವಿದ್ದ ಕಾರಣ ಹಾಗೆ ಕಂಡಿದೆ ಅಷ್ಟೇ. ನಿಜಕ್ಕೂ ಅಲ್ಲಿ ಏನು ಇಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ‘ನನ್ನ ವಯಸ್ಸಿನಲ್ಲಿ ಗರ್ಭಧರಿಸಿದ್ದೇನೆ ಎಂಬ ಊಹಾಪೋಹಗಳು ಹರಿದಾಡುತ್ತಿರುವುದನ್ನು ನಾನು ನಿಜಕ್ಕೂ ಇಷ್ಟಪಡುತ್ತೇನೆ. ಇದು ದೇಶದ ವಿಕಸನದ ಸಂಕೇತವಾಗಿದೆ’ ಎಂದು ಹೇಳಿದ್ದಾರೆ.

ನಟಿ ನೀನಾ ಅವರು ವಿವಾಹವಾಗುವುದಕ್ಕೆ ಮೊದಲು ಮಗುವನ್ನು ಪಡೆದಿದ್ದಾರೆ. ಇವರು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್ ಅವರ ಜೊತೆ ಬಹು ಕಾಲದಿಂದಲೂ ಸಂಪರ್ಕದಲ್ಲಿ ಇದ್ದರು.

ಈ ನಡುವೆ ಅವರಿಗೆ ಮಗು ಕೂಡ ಜನಿಸಿತ್ತು. ಆದರೆ ನಂತರದ ದಿನಗಳಲ್ಲಿ ವಿವಿಯನ್ ರಿಚರ್ಡ್ಸ್ ಮದುವೆಯಾಗಲು ಒಪ್ಪಲಿಲ್ಲ. ಆಗ ಸಾಮಾಜದ ಟೀಕೆಯ ನಡುವೆಯೂ ತಮ್ಮ ಮಗುವನ್ನು ಬೆಳೆಸಿದ್ದಾರೆ. ಬಳಿಕ ಗುಪ್ತಾ ಅವರು 2008ರಲ್ಲಿ ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.