ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ ನೇಗಿಲ ಒಡೆಯ...

Last Updated 13 ಫೆಬ್ರುವರಿ 2022, 9:25 IST
ಅಕ್ಷರ ಗಾತ್ರ

ಸೂರ್ಯೋದಯ ಮೂವೀಸ್ ಲಾಂಛನದಲ್ಲಿ ನಾಗಳ್ಳಿ ಅನಂತರತ್ನಮ್ಮ ಅವರು ನಿರ್ಮಿಸುತ್ತಿರುವ ನೇಗಿಲ ಒಡೆಯ ಚಿತ್ರದ ಪೋಸ್ಟರನ್ನು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಸಚಿವ ಬಿ.ಶ್ರೀರಾಮುಲು ಹಾಗೂ‌ ಜನಾರ್ದನ ರೆಡ್ಡಿ ಅವರು ಬಿಡುಗಡೆ ಮಾಡಿದರು.

ಕೃಷಿ ಡಿಪ್ಲೊಮಾ ಮುಗಿಸಿ ಹಳ್ಳಿಗೆ ಬರುವ ನಾಯಕ ವ್ಯವಸಾಯ ಮಾಡಿಕೊಂಡಿರುತ್ತಾನೆ. ಹಳ್ಳಿಯ ಶ್ರೀಮಂತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಆದರೆ ರೈತನೊಬ್ಬನಿಗೆ ತನ್ನ‌ ಮಗಳನ್ನು ಕೊಡಲು ನಾಯಕಿಯ ತಂದೆ ಹಿಂದೇಟು ಹಾಕುತ್ತಾನೆ. ನಂತರ ನಾಯಕ ವಿಶ್ವಮಟ್ಟದ ಸಾಧನೆ ಮಾಡುವ ಮೂಲಕ ರೈತರನ್ನು ಕಡೆಗಣಿಸಬೇಡಿ ಎಂಬ ಸಂದೇಶ ನೀಡುತ್ತಾನೆ ಎಂದು ಚಿತ್ರತಂಡ ಕತೆಯ ಸಾರಾಂಶ ಹೇಳಿದೆ.

ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ‘ಯು’ ಪ್ರಮಾಣಪತ್ರ ದೊರೆತಿದ್ದು ಸದ್ಯದಲ್ಲೇ ಚಿತ್ರವು ತೆರೆಕಾಣಲಿದೆ. ಎನ್.ಕೃಷ್ಣಮೋಹನ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ವಿಕ್ಟರಿ ಡ್ಯಾನಿಯಲ್ ಅವರ ಸಂಗೀತ, ಎಸ್.ಬಾಲು ಅವರ ಛಾಯಾಗ್ರಹಣ, ಅನಿಲ್ ಚಿನ್ನು ಸಂಕಲನ, ಹೇಮಂತರಾಜು, ಮಂಜು, ಸಿಎನ್.ಮೂರ್ತಿ ಅವರ ಸಾಹಿತ್ಯ, ನಿತಿನ್ ರಾಜ್ ಹಿನ್ನೆಲೆ ಸಂಗೀತ, ಕ್ರೇಜಿ ಶ್ರೀದರ್ ನೃತ್ಯ, ಸಿಎನ್.ಮೂರ್ತಿ ಅವರ ಸಹನಿರ್ದೇಶನವಿದೆ. ಚಿತ್ರದಲ್ಲಿ ನಾಯಕನಾಗಿ ಭಾನುಪ್ರಕಾಶ್, ನಾಯಕಿಯಾಗಿ ಪ್ರಿಯಾ ಪಾಂಡೆ ಅಭಿನಯಿಸಿದ್ದಾರೆ. ಉಳಿದಂತೆ ಅಮರನಾಥ್ ಆರಾಧ್ಯ, ಶ್ರೀಬಲರಾಮ್, ವಿಕೆ.ಮೂರ್ತಿ, ಜಿಮ್ ಶಿವು, ಬಳ್ಳಾರಿ ಮಂಜು, ಅಶೋಕ್ ನಾಗರಾಜ್, ಹೇಮಂತ್ ಯುನಿಸ್, ಅಜಿತ್, ವೆಂಕಟೇಶ್, ವಿಕೆ.ಬಸಪ್ಪ, ನಾಗಭೂಷಣ್ ಮುಂತಾದವರ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT