ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾಕ್ಷಿ ಸಿನ್ಹಾ ನಂತರ ಸಾಮಾಜಿಕ ಜಾಲತಾಣ ತೊರೆದ ನೇಹಾ ಕಕ್ಕರ್

Last Updated 24 ಜೂನ್ 2020, 9:29 IST
ಅಕ್ಷರ ಗಾತ್ರ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್‌ನಲ್ಲಿ ಕೇಳುಬರುತ್ತಿರುವ ‘ಸ್ವಜನಪಕ್ಷಪಾತ‘ ಚರ್ಚೆಯ ಬಿಸಿ ಸ್ಟಾರ್‌ ಕಿಡ್‌ಗಳಿಗೆ ತಟ್ಟಿದೆ. ಚರ್ಚೆಗಿಳಿದಿರುವ ಸುಶಾಂತ್‌ ಅಭಿಮಾನಿಗಳು ನೇರವಾಗಿ ಈ ‘ಸ್ಟಾರ್‌ ಕಿಡ್‌‘ಗಳನ್ನೇ ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಗಳು ಕೇಳುತ್ತಿದ್ದಂತೆ ಸ್ಟಾರ್‌ ನಟರು ಸಾಮಾಜಿಕ ಜಾಲತಾಣದಿಂದ ತಮ್ಮ ಖಾತೆಯನ್ನು ಡಿಆಕ್ಟಿವೇಟ್‌‌ಮಾಡುತ್ತಿದ್ದಾರೆ.

ಹೀಗೆ ತಮ್ಮ ವಿರುದ್ಧದ ಟ್ರೋಲಿಂಗ್‌ ಮತ್ತು ನಕಾರಾತ್ಮಕ ಅಭಿಪ್ರಾಯಗಳಿಗೆ ಬೆನ್ನುಹಾಕಿ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿಷ್ಕ್ರಿಯಗೊಳಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದವರು ಬಾಲಿವುಡ್‌ನಟಿ ಸೋನಾಕ್ಷಿ ಸಿನ್ಹಾ. ಇದೀಗ ಬಾಲಿವುಡ್‌ನ ಮತ್ತೊಬ್ಬ ಸೆಲೆಬ್ರಿಟಿ, ಖ್ಯಾತ ಗಾಯಕಿ ನೇಹಾ ಕಕ್ಕರ್‌ ಕೂಡ ಸಾಮಾಜಿಕ ಜಾಲತಾಣಕ್ಕೆ ಗುಡ್‌ಬೈ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ಮುನ್ನ ಅವರು, ’ನಾನು ನಿದ್ರೆ ಮಾಡುತ್ತಿರುತ್ತೇನೆ. ಎಲ್ಲಾ ಸರಿ ಹೋದಾಗ ದಯಮಾಡಿ ನನ್ನನ್ನು ಎಚ್ಚರಗೊಳಿಸಿ. ಈ ಜಗತ್ತಿನಲ್ಲಿ ಸ್ವಾತಂತ್ರ್ಯ, ಪ್ರೀತಿ, ಗೌರವ, ಕಾಳಜಿ ಇರುವ ಒಳ್ಳೆಯ ಜನರೂ ಇದ್ದಾರೆ. ಹಾಗಾಗಿ ದ್ವೇಷ, ನೆಪೋಟಿಸಂ, ಅಸೂಯೆ, ಹೊಟ್ಟೆಕಿಚ್ಚು, ಆತ್ಮಹತ್ಯೆಯಂತಹವುಗಳಿಂದ ದೂರವಿರಲು ಬಯಸುತ್ತಿದ್ದೇನೆ. ಗುಡ್ ನೈಟ್. ಚಿಂತಿಸಬೇಡಿ ನಾನು ಸಾಯುತ್ತಿಲ್ಲ. ಒಂದೆರಡು ದಿನಗಳವರೆಗೆ ದೂರ ಹೋಗುತ್ತಿದ್ದೇನೆ‘ ಎಂದು ಪೋಸ್ಟ್‌‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT