ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮುನ್ನೆಲೆಗೆ ಬಂದ ಸ್ವಜನಪಕ್ಷಪಾತದ ಚರ್ಚೆ: ಟ್ರೆಂಡ್‌ ಆದ ಆಲಿಯಾ, ರಣಬೀರ್‌

ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸ್ಟಾರ್‌ಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪರವಾಗಿ ಚಿತ್ರ ನಿರ್ದೇಶಕ ಆರ್. ಬಾಲ್ಕಿ ಮಾತನಾಡಿದ್ದಾರೆ. ಪರಿಣಾಮವಾಗಿ ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಮಿತಿಮೀರಿದೆ ಎಂಬ ಚರ್ಚೆಗಳು ಸುಶಾಂತ್‌ ಸಿಂಗ್‌ ರಜಪೂರ್‌ ಆತ್ಮಹತ್ಯೆಯ ನಂತರ ಹುಟ್ಟಿಕೊಂಡಿದ್ದವು.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಆರ್.ಬಾಲ್ಕಿ, 'ಆಲಿಯಾ ಭಟ್ ಅಥವಾ ರಣಬೀರ್ ಕಪೂರ್‌ಗಿಂತ ಉತ್ತಮ ನಟ-ನಟಿಯರನ್ನು ನನಗೆ ಹುಡುಕಿಕೊಡಿ. ಆ ನಂತರ ವಾದ ಮಾಡಿ. ಸ್ಟಾರ್‌ಗಳ ಮಕ್ಕಳಲ್ಲಿ ಕೆಲವು ಅತ್ಯುತ್ತಮ ನಟ-ನಟಿಯರಿದ್ದಾರೆ. ಇದು ಸ್ವಜನಪಕ್ಷಪಾತ ಎಂದು ವಾದ ಮಾಡುವುದರಿಂದ ಅವರಿಗೆ ಅನ್ಯಾಯವಾಗಲಿದೆ' ಎಂದು ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಹೊರಗಿನವರಿಗಿಂತ ಸ್ಟಾರ್‌ ಮಕ್ಕಳಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎನ್ನುವುದನ್ನು ನಾನು ಒಪ್ಪುತ್ತೇನೆ ಎಂದೂ ಬಾಲ್ಕಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಬಾಲ್ಕಿ ಹೇಳಿಕೆ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಹೆಸರು ಟ್ರೆಂಡ್‌ ಆಗುತ್ತಿದೆ. ಕೆಲವರು ಆಲಿಯಾ, ರಣಬೀರ್‌ ಪರವಾಗಿ ನಿಂತರೆ, ಕೆಲವರು ಅವರನ್ನು ವಿರೋಧಿಸಿ ಟ್ವೀಟ್‌ ಮಾಡಿದ್ದಾರೆ.

ಆಲಿಯಾ ಮತ್ತು ರಣಬೀರ್ ಸ್ವಜನಪಕ್ಷಪಾತದ ಉತ್ಪನ್ನಗಳಾಗಿರಬಹುದು. ಆದರೆ, ಅವರು ಇದೀಗ ಇರುವ ಸ್ಥಾನ ತಲುಪಲು ಕಷ್ಟಪಟ್ಟಿದ್ದಾರೆ ಎಂದು ಜಸ್ಟ್‌ ಇಂಡಿಯನ್‌ ಮೆಮ್ಸ್‌ ಟ್ವೀಟಿಸಿದೆ.

ರಾಟನ್ ಟೊಮೆಟೊ ಸೈಟ್‌ನಲ್ಲಿ ಆಲಿಯಾ ಭಟ್ ಹೊರತುಪಡಿಸಿ ಬಾಲಿವುಡ್‌ನ ಯಾವ ನಟ- ನಟಿಯರ ಚಲನಚಿತ್ರಗಳೂ ಶೇ 100 ರೇಟಿಂಗ್ ಪಡೆಯುವುದಿಲ್ಲ ಎಂದು ದಕ್ಷ್‌ ಟಂಡನ್‌ ಎಂಬುವವರು ಹೇಳಿದ್ದಾರೆ.

ಕೆಲ ಬಾಲಿವುಡ್ ನಿರ್ದೇಶಕರಿಗೆ ಅಲಿಯಾ ಭಟ್ ಮತ್ತು ರಣಬೀರ್‌ ಕಪೂರ್‌ಗಿಂತ ಉತ್ತಮ ನಟರನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಇದಕ್ಕಿಂತ ಉತ್ತಮವಾದ ಪುರಾವೆ ಯಾವುದು? ಬಾಲಿವುಡ್ ಈಗ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂದು ಸಂಕೇತ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT