ಬುಧವಾರ, ಮೇ 25, 2022
24 °C

ನೆಟ್‌ಫ್ಲಿಕ್ಸ್‌ ಚಂದಾ ಶುಲ್ಕ ಇಳಿಕೆ: ಮಂಗಳವಾರದಿಂದ ಹೊಸ ದರಗಳು ಜಾರಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದಲ್ಲಿ ನೆಟ್‌ಫ್ಲಿಕ್ಸ್ ಚಂದಾ ಶುಲ್ಕದಲ್ಲಿ ಗರಿಷ್ಠ ಶೇಕಡ 60ರವರೆಗೆ ಕಡಿತ ಆಗಿದೆ. ಮಂಗಳವಾರದಿಂದ ಜಾರಿಗೆ ಬಂದಿರುವ ಹೊಸ ದರಗಳ ಅನ್ವಯ, ಮೊಬೈಲ್‌ ಮೂಲಕ ಮಾತ್ರ ನೆಟ್‌ಫ್ಲಿಕ್ಸ್‌ ವೀಕ್ಷಿಸುವ ಪ್ಲಾನ್‌ ಶುಲ್ಕವು ತಿಂಗಳಿಗೆ ₹ 149 ಆಗಿದೆ. ಈ ಮೊದಲು ಇದು ₹ 199 ಆಗಿತ್ತು.

ಬೇಸಿಕ್‌ ಪ್ಲಾನ್‌ಗೆ ತಿಂಗಳಿಗೆ ₹ 199 (ಮೊದಲು ₹ 499 ಇತ್ತು), ಸ್ಟ್ಯಾಂಡರ್ಡ್‌ ಪ್ಲಾನ್‌ಗೆ ₹ 499 (ಮೊದಲು ₹ 649) ಹಾಗೂ ಪ್ರೀಮಿಯಂ ಪ್ಲಾನ್‌ಗೆ ₹ 649  (ಮೊದಲು ₹ 799) ನಿಗದಿ ಮಾಡಲಾಗಿದೆ.

‘ಬೇಸಿಕ್‌ ಪ್ಲಾನ್‌ನಲ್ಲಿ ಅತಿಹೆಚ್ಚಿನ ಪ್ರಮಾಣದ ಕಡಿತ ಆಗಿದೆ’ ಎಂದು ನೆಟ್‌ಫ್ಲಿಕ್ಸ್‌ನ ಭಾರತದ ಉಪಾಧ್ಯಕ್ಷೆ ಮೋನಿಕಾ ಶೆರ್ಗಿಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು