ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳು

7

ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳು

Published:
Updated:

ಕಥೆಯೊಂದು ಶುರುವಾಗಿದೆ
ಪರಂವಃ ಸ್ಟುಡಿಯೊಸ್‌ ಮತ್ತು ಪುಷ್ಕರ್ ಫಿಲಂಸ್ ಲಾಂಛನದಲ್ಲಿ ರಕ್ಷಿತ್ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನಯ್ಯ, ವಿನೋದ್ ದಿವಾಕರ್ ಹಾಗೂ ಪ್ರಸನ್ನ ಹೆಗ್ಡೆ  ನಿರ್ಮಿಸಿರುವ ಸಿನಿಮಾ ‘ಕಥೆಯೊಂದು ಶುರುವಾಗಿದೆ’. 

ಸೆನ್ನಾ ಹೆಗ್ಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದಾರೆ. ಶ್ರೀರಾಜ್ ರವಿಚಂದ್ರನ್ ಛಾಯಾಗ್ರಹಣ, ಸಚಿನ್ ವಾರಿಯರ್ ಸಂಗೀತ ನಿರ್ದೇಶನ ಹಾಗೂ ಎಸ್.ಎಸ್. ಮ್ಯಾಕ್ಸ್ ಸಂಕಲನ ಈ ಚಿತ್ರಕ್ಕಿದೆ. ತಾರಾಬಳಗದಲ್ಲಿ ದಿಗಂತ್, ಪೂಜಾ, ಅಶ್ವಿನ್ ರಾವ್ ಪಲ್ಲಕಿ, ಶ್ರೇಯಾ ಅಂಜನ್, ಪ್ರಕಾಶ್‌, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ರಘು ರಾಮನ್‍ಕೊಪ್ಪ ಇದ್ದಾರೆ.  

ಸ್ಟೇಟ್‍ಮೆಂಟ್
ವೇಣು ಕೆ. ಎಚ್‌. ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಅಪ್ಪಿ ಪ್ರಸಾದ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಹಾಗೂ ಸತ್ಯ ಅವರ ಛಾಯಾಗ್ರಹಣವಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನವಿದೆ. ತಾರಾಬಳಗದಲ್ಲಿ ರಾಧಾ ರಾಮಚಂದ್ರ, ಗಿರೀಶ್ ಜತ್ತಿ, ಅಭಿಲಾಶ್, ಮನೋಜ್, ಕಾರ್ತಿಕ್, ನಿರಂಜನ್, ಎಂ.ಕೆ.ಮಠ ಇದ್ದಾರೆ.

ವಾಸು ನಾನ್ ಪಕ್ಕಾ ಕಮರ್ಷಿಯಲ್
ವಿಂಕ್‍ವಿಷಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಚಿತ್ರ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’. ಅಜಿತ್ ವಾಸನ್ ಉಗ್ಗಿನ ನಿರ್ದೇಶಿಸಿರುವ ಈ ಚಿತ್ರದ ಛಾಯಾಗ್ರಹಣ ದಿಲಿಪ್ ಚಕ್ರವರ್ತಿ ಅವರು ಮಾಡಿದ್ದಾರೆ. ಅನೀಷ್ ಲೋಕನಾಥ ಸಂಗೀತವಿದೆ. ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣಾ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

ಕುಮಾರಿ 21 ಎಫ್‌
ಸಂಪತ್ ಕುಮಾರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿದ್ದಾರೆ. ಶ್ರೀಮಾನ್ ವೆಮುಲ  ನಿರ್ದೇಶಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸಾಗರ್ ಮಹತಿ ಸಂಗೀತ ನಿರ್ದೇಶನ ಇದೆ. ರಾಮಿ ರೆಡ್ಡಿ ಅವರ ಛಾಯಾಗ್ರಹಣ ಮಾಡಿದ್ದಾರೆ. ಪ್ರಣಾಮ್ ದೇವರಾಜ್ ಜತೆ ನಿಧಿ ಕುಶಾಲಪ್ಪ ತೆರೆ ಹಂಚಿಕೊಂಡಿದ್ದಾರೆ. ರವಿಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !