ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ‌ ಕಾರ್ಮಿಕರಿಗೆ ನಿಖಿಲ್ ಕುಮಾರಸ್ವಾಮಿ ₹ 37 ಲಕ್ಷ  ನೆರವು

Last Updated 28 ಮಾರ್ಚ್ 2020, 13:18 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಕಾರ್ಮಿಕರಿಗೆಸಿನಿಮಾರಂಗದ ಯುವರಾಜ ನಿಖಿಲ್ ಕುಮಾರ್ ನೆರವು ನೀಡಿದ್ದಾರೆ

ಕೊರೊನಾ ಸೋಂಕಿನಿಂದ ಚಿತ್ರರಂಗದ ಚಟಿವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿಚಲನಚಿತ್ರ ಕಾರ್ಮಿಕರ ಬದುಕು ಆಂತಕಕ್ಕೆ ಸಿಲುಕಿದೆ.ಇದನ್ನು ಅರಿತ ನಟ ಹಾಗು ರಾಜಕಾರಣಿ ನಿಖಿಲ್ ಕುಮಾರ್ ತಂದೆ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಅವರ ಸಲಹೆಯಂತೆ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ 20ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಸದಸ್ಯರಿಗಾಗಿ ₹ 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಹಾಗೂಚಲನ‌ಚಿತ್ರ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ‌ ಕಾರ್ಮಿಕರಿಗಾಗಿ₹ 32ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮೂಲತಃ ಚಿತ್ರ ನಿರ್ಮಾಪಕರು ಆಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕಷ್ಟಗಳನ್ನು ಅರಿತು ಪುತ್ರನ‌ ಆಸೆಯಂತೆ ಕಾರ್ಮಿಕರಿಗೆ ನೆರವು ನೀಡಿದ್ದಾರೆ.

ಚಲನಚಿತ್ರ ಕಾರ್ಮಿಕರಿಗೆ ₹32 ಲಕ್ಷ‌ ಮತ್ತು ಕಿರುತೆರೆಕಾರ್ಮಿಕರಿಗೆ ₹ 5 ಲಕ್ಷ ಸೇರಿ ಒಟ್ಟು₹ 37 ಲಕ್ಷ ನೀಡಿದ್ದಾರೆ. ಆರಂಭದಲ್ಲಿ ಕುಮಾರಸ್ವಾಮಿ ಕಾರ್ಮಿಕರಿಗೆ ಅಗತ್ಯವಿರುವ ಆಹಾರ ಧಾನ್ಯ ವಿತರಿಸುಲು ಮುಂದಾಗಿದ್ದರು. ಅದರೆ ‌ಸರಕು ಸಾಗಾಣೆ ಸಮಸ್ಯೆ ಯಿಂದಾಗಿ ಎಲ್ಲರಿಗೂ ತಲುಪಿಸುವುದು ಕಷ್ಟ ಎನ್ನುವುದನ್ನು ಅರಿತು ಸ್ವತಃ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಮುಂದಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಸರಿ ಸುಮಾರು ₹ 32 ಲಕ್ಷ ವನ್ನು 20 ಕ್ಕೂ ಹೆಚ್ಚು ಕಾರ್ಮಿಕ‌ ಸಂಘಟನೆ‌ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲು ಚಲನಚಿತ್ರ ಕಾರ್ಮಿಕರ ಒಕ್ಕೂಟ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT