ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಮಿಂಚು, ನಿರೀಕ್ಷಾ ಶೆಟ್ಟಿ

Last Updated 2 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಕೋಸ್ಟಲ್‍ವುಡ್‍ಗೆ ಇದೀಗ ಹೆಜ್ಜೆಯಿಟ್ಟಿರುವ ನಿರೀಕ್ಷಾ, ಬಣ್ಣದ ಲೋಕದಲ್ಲಿ ಸಾಧಿಸುವ ಕನಸು ಅವರದ್ದು. ನಿರೀಕ್ಷಾ ಶೆಟ್ಟಿಯು ಚಿತ್ತರಂಜನ್ ಶೆಟ್ಟಿ ಹಾಗೂ ಸುಜಾತ ದಂಪತಿಯ ಪುತ್ರಿ.

ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿ. ಶಾಸ್ತ್ರೀಯ ನೃತ್ಯ, ಜಾನಪದ, ಸಿನಿಮಾ ಪ್ರಕಾರಗಳಲ್ಲೂ ತೊಡಗಿಸಿಕೊಳ್ಳುವ ಹುಮ್ಮಸ್ಸು.ಎಲ್ಲವನ್ನೂ ಕಲಿಯುವ ಆಸಕ್ತಿ ಇದ್ದುದರಿಂದ ನೃತ್ಯ, ಸಂಗೀತದಲ್ಲಿ ಮಿಂಚಿದ್ದಾರೆ. ಅಭಿನಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆದ ಯುವ ದಸರಾದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿಯೂ ತಮ್ಮ ನೃತ್ಯ ಕಾರ್ಯಕ್ರಮ ನೀಡಿದ್ದಾರೆ.

2015-2017 ಸಾಲಿನಲ್ಲಿ ನಡೆದ ಪ್ರಿನ್ಸೆಸ್‌ ಆಫ್ ಪರ್ಲ್‍ನಲ್ಲಿ ಎರಡು ಬಾರಿ ಕಿರೀಟ, ಬಂಟ್ವಾಳದಲ್ಲಿ ನಡೆದ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್, ಮಿಸ್ ಬಂಟ್ 2017ರಲ್ಲಿ ಬೆಸ್ಟ್ ಬಂಟ್ ಪರ್ಸನಾಲಿಟಿ ಅವಾರ್ಡ್, ಚಿಕ್ಕಮಗಳೂರಿನಲ್ಲಿ ನಡೆದ ‘ಮಿಸ್ ಮಲ್ನಾಡ್ 2016’, ‘ಬೆಸ್ಟ್ ಕ್ಯಾಟ್‍ವಾಕ್ ಅವಾರ್ಡ್’, ಮೈಸೂರಿನ ‘ಮಿಸ್ ಕರ್ನಾಟಕ 2016’ರಲ್ಲಿ 4ನೇ ಸ್ಥಾನ, ಪುತ್ತೂರಿನ ‘ಮಿಸ್ ಬಂಟ್ 2017’ ಹಾಗೂ ಮುಂಬೈ ಸಂಸ್ಥೆ ‘ಅಕ್ಷಾಂಕ 2017’ರಲ್ಲಿ ಮಿಸ್ ಪಾಪ್ಯುಲರ್ ಬಂಟ್’ ಕಿರೀಟವನ್ನು ಪಡೆದುಕೊಂಡಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲೂ ಅವರದೇ ಮೇಲುಗೈ. ‌ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕಿಯಾಗಿ, ದೆಹಲಿಯ ಆರ್ಮಿ ಪರೇಡ್‍ನೊಂದಿಗೆ ಧ್ವಜವಂದನೆಯನ್ನೂ ಸಲ್ಲಿಸಿದ್ದಾರೆ. ಇದರೊಂದಿಗೆ ತಮ್ಮ ಕನಸಿನ ಕೂಸು ಅಂದರೆ, ಸಿನಿಮಾಕ್ಕೆ ಪದಾರ್ಪಣೆ ಮಾಡಲು ಅವಕಾಶ ದೊರೆತದ್ದು ಅವರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

ಈ ತುಳುನಾಡಿನ ಚೆಲುವೆ ನಿರೀಕ್ಷಾ ‘ಅಪ್ಪೆ ಟೀಚರ್’ ಎನ್ನುವ ತುಳು ಸಿನಿಮಾದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮ ಮೊದಲ ಹೆಜ್ಜೆಯಲ್ಲೇ ಯಶಸ್ಸನ್ನು ಕಂಡಿರುವ ಇವರಿಗೀಗ ಅವಕಾಶಗಳು ಸಾಲು ಸಾಲಾಗಿ ದೊರೆತಿವೆ. ಪ್ರಸ್ತುತ ಲಾಸ್ಟ್ ಬೆಂಚ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT