ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರೋಜಿನಿ’ ಚಿತ್ರದಲ್ಲಿ ನಿಸರ್ಗ ಗೌಡ

Last Updated 15 ಜೂನ್ 2022, 12:44 IST
ಅಕ್ಷರ ಗಾತ್ರ

ಸರೋಜಿನಿ ನಾಯ್ಡು ಅವರ ಜೀವನ ಕಥೆ ಆಧರಿಸಿದ ‘ಸರೋಜಿನಿ’ ಚಿತ್ರದ ಪ್ರಧಾನ ಪಾತ್ರದಲ್ಲಿ ನಿಸರ್ಗ ಗೌಡ ಕಾಣಿಸಿಕೊಳ್ಳಲಿದ್ದಾರೆ.

ವಿಸಿಕಾ ಫಿಲ್ಮ್ಸ್ ಪ್ರೈವೆಟ್ ಲಿಮಿಟೆಡ್‌ನ ಚರಣ್ ಸುವರ್ಣ, ಹನಿ ಚೌಧರಿ ಈ ಚಿತ್ರದ ನಿರ್ಮಾಪಕರು. ವಿನಯಚಂದ್ರ ನಿರ್ದೇಶಕರು. ನಿಸರ್ಗ ಗೌಡ ಅವರು ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಿಸರ್ಗ ಅವರಿಗೆ ಈ ಚಿತ್ರದ ಪಾತ್ರದಲ್ಲಿ ಕಾಣಿಸಿಕೊಳ್ಳಲು ತುಂಬಾ ಖುಷಿಯಾಗಿದೆಯಂತೆ. ಈ ಪಾತ್ರ ತುಂಬಾ ಸವಾಲಿನದ್ದು. ಈ ಪಾತ್ರ ಹಳೆಯ ಕಾಲಘಟ್ಟದ್ದು. ಇನ್ನೂ ಇಂತಹ ಅವಕಾಶಗಳು ಈ ಸಿನಿಮಾದ ಮೂಲಕ ದೊರಕಲಿವೆ ಎಂಬ ಭರವಸೆಯಲ್ಲಿದ್ದಾರೆ.

ಚಿತ್ರದ ಪೋಸ್ಟರ್‌ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದಿದೆ. ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT