ಶುಕ್ರವಾರ, ನವೆಂಬರ್ 22, 2019
20 °C

ನೋ ಲಿಪ್‌ ಲಾಕ್‌: ತಮನ್ನಾ

Published:
Updated:

ನಟಿ ತಮನ್ನಾ ಭಾಟಿಯಾ ಹಿಂದಿ, ತಮಿಳು, ತೆಲುಗು ಚಿತ್ರರಂಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದಾರೆ. ಸುಮಾರು ಚಿತ್ರಗಳಲ್ಲಿ ನಟಿಸಿದ್ದರೂ ಅವರು ಇಲ್ಲಿತನಕ ಯಾವ ಸಿನಿಮಾದಲ್ಲೂ ಲಿಪ್‌ ಲಾಕ್‌ ದೃಶ್ಯಗಳಲ್ಲಿ ನಟಿಸಿಲ್ಲವಂತೆ. ಅವರು ಅಂತಹ ದೃಶ್ಯಗಳಲ್ಲಿ ನಾನು ನಟಿಸಲಾರೆ ಎಂದು ಸಿನಿಲೋಕಕ್ಕೆ ಕಾಲಿಟ್ಟಾಗಲೇ ನಿರ್ಧರಿಸಿದ್ದಾರಂತೆ. ಈಗಲೂ ತಮ್ಮ ಆ ನಿಯಮಕ್ಕೆ ಬದ್ಧರಾಗಿದ್ದಾರೆ.

ಈಗ ಹೆಚ್ಚಿನ ನಟ, ನಟಿಯರು ಸಿನಿಮಾಕ್ಕೆ ಅವಶ್ಯವಿದ್ದರೆ ತಾವು ಲಿಪ್‌ಲಾಕ್‌ ದೃಶ್ಯಗಳಲ್ಲಿ ನಟಿಸಲು ಅಭ್ಯಂತರ ಏನಿಲ್ಲ ಎನ್ನುತ್ತಿದ್ದಾರೆ. ಆದರೆ ‘ನೋ ಲಿಪ್‌ ಲಾಕ್‌’ ನಿಯಮವನ್ನು ಸಡಿಲ ಮಾಡಲು ತಮಗೆ ಇನ್ನೂ ಬಲವಾದ ಕಾರಣಗಳು ಸಿಕ್ಕಿಲ್ಲ ಎನ್ನುತ್ತಾರೆ ತಮನ್ನಾ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು.  ‘ನಾನು ಬಾಲನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದವಳು. ಸಿನಿಮಾದಲ್ಲಿ ಅಂತಹ ದೃಶ್ಯಗಳಲ್ಲಿ ನಟಿಸಲು ನಾನು ಒಪ್ಪುವುದಿಲ್ಲ. ಕೆಲವೊಮ್ಮೆ ಅಂತಹ ಸೀನ್‌ಗಳಿದ್ದಾಗ ಅಂತಿಮ ದಿನದವರೆಗೂ ಕಾದು ಬೇಡ ಎಂದಿದ್ದಿದೆ. ಆ ನಿಯಮವನ್ನು ಸಡಿಲ ಮಾಡಲು ನನಗೆ ಬಲವಾದ ಕಾರಣಗಳು ಇನ್ನೂ ಸಿಕ್ಕಿಲ್ಲ’ ಎಂದು ನಗುತ್ತಾರೆ.

ತಮನ್ನಾ ಬಿಗ್‌ ಬಜೆಟ್‌ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೇ ‘ದಟ್‌ ಈಸ್‌ ಮಹಾಲಕ್ಷ್ಮೀ’ ಚಿತ್ರದಲ್ಲೂ ನಟಿಸಿದ್ದು, ಇದು ಕಂಗನಾ ರನೋಟ್‌ ಅವರ ‘ಕ್ವೀನ್‌’ ಚಿತ್ರದ ರಿಮೇಕ್‌.

ಇದನ್ನೂ ಓದಿ: ತಮನ್ನಾ ಮದ್ವೆ ಯಾವಾಗ?

ಪ್ರತಿಕ್ರಿಯಿಸಿ (+)