ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಡಿ ಸ್ವಾಮಿ...’ ರಿಷಿ ಇರೋದೆ ಹೀಗೆ!

Last Updated 8 ಫೆಬ್ರುವರಿ 2022, 10:03 IST
ಅಕ್ಷರ ಗಾತ್ರ

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟ ನಟ ರಿಷಿ, ಇದೀಗ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಎನ್ನುತ್ತಿದ್ದಾರೆ.

‘ಆಪರೇಷನ್‌ ಅಲಮೇಲಮ್ಮ’ ಸಿನಿಮಾ ಬಳಿಕ ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದ ಹೇಮಂತ್‌ ‌ರಾವ್‌ ನಿರ್ದೇಶನದ ‘ಕವಲುದಾರಿ’ ಚಿತ್ರದಲ್ಲಿ ‘ಶ್ಯಾಮ್‌’ ಪಾತ್ರದಲ್ಲಿ ಮಿಂಚಿದ್ದ ರಿಷಿ, ಇದೀಗ ಮತ್ತೊಂದು ವಿಭಿನ್ನವಾದ ಕಥಾಹಂದರ ಹೊಂದಿರುವ ಚಿತ್ರದ ಮುಖಾಂತರ ಮತ್ತೆ ಪ್ರೇಕ್ಷಕರ ಎದುರಿಗೆ ಬಂದಿದ್ದಾರೆ.

ಇಸ್ಲಾಹುದ್ದೀನ್‌ ಎನ್‌.ಎಸ್‌. ನಿರ್ದೇಶನದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ‘ಸಾಯಿ ಕುಮಾರ್‌’ ಎಂಬ ಪಾತ್ರದಲ್ಲಿ ರಿಷಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಯಸಿ ಕೈಕೊಟ್ಟಾಗ ತನ್ನದೇ ಆಲೋಚನೆ, ಖಿನ್ನತೆಯ ಕೂಪದಲ್ಲಿ ಬಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಹರಸಾಹಸ ಪಡುವ ಈತನ ಕಥೆಯೇ ಚಿತ್ರದ ಜೀವಾಳ. ರೈಲಿನಡಿ ಬಿದ್ದು, ತನಗೆ ತಾನೇ ಸುಪಾರಿ ನೀಡಿ, ಬಂದೂಕಿನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ‘ಸಾಯಿ ಕುಮಾರ್‌’ ಪಡುವ ಪಾಡು ಟೀಸರ್‌ನಲ್ಲಿ ಪ್ರೇಕ್ಷಕರನ್ನು ಸೆಳೆದಿದೆ.

ರಿಷಿಗೆ, ಧನ್ಯಾ ಬಾಲಕೃಷ್ಣ ಜೋಡಿಯಾಗಿದ್ದು, ಗ್ರೀಷ್ಮಾ ಶ್ರೀಧರ್‌, ಅಪೂರ್ವ ಭಾರದ್ವಾಜ್‌, ಭವಾನಿ ಪ್ರಕಾಶ್‌, ನಾಗಭೂಷಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮ್ರೇಜ್‌ ಸೂರ್ಯವಂಶಿ ಅವರೇ ಈ ಸಿನಿಮಾದ ನಿರ್ಮಾಪಕರು.

ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದ್ದು, ಪ್ರಸನ್ನ ಶಿವರಾಮನ್‌ ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT