ಶನಿವಾರ, ಜನವರಿ 18, 2020
19 °C

ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ: ಪರಿಣಿತಿ ಬದಲಿಗೆ ನೋರಾ ಫತೇಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದಲ್ಲಿ ನಾಯಕಿಯಾಗಿ ಪರಿಣಿತಿ ಚೋಪ್ರಾ ಬದಲಾಗಿ ನೋರಾ ಫತೇಹಿ ನಟಿಸುತ್ತಿದ್ದಾರೆ.

ಸೈನಾ ನೆಹ್ವಾಲ್‌ ಅವರ ಜೀವನಕತೆಯಾಧಾರಿತ ಚಿತ್ರದಲ್ಲಿ ಪರಿಣಿತಿ ತೊಡಗಿಸಿಕೊಂಡಿದ್ದರಿಂದ ಅವರು ಈ ಚಿತ್ರದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ಈ ಚಿತ್ರವನ್ನು ಅಭಿಷೇಕ್‌ ದುದೈಯಾ ನಿರ್ದೇಶನ ಮಾಡುತ್ತಿದ್ದು, ನೋರಾ, ಗುಪ್ತಚರ ಅಧಿಕಾರಿ ಪಾತ್ರ ನಿರ್ವಹಿಸಲಿದ್ದಾರೆ.

ಈ ಚಿತ್ರದಲ್ಲಿ ಅಜಯ್‌ ಜೊತೆಗೆ ಸಂಜಯ್‌ ದತ್‌, ಸೋನಾಕ್ಷಿ ಸಿನ್ಹಾ, ರಾನಾ ದಗ್ಗುಬಾಟಿ, ಪರಿಣಿತಿ ಚೋಪ್ರಾ, ಆ್ಯಮಿ ವಿರ್ಕ್‌ ನಟಿಸುತ್ತಿರುವುದು ವಿಶೇಷ. ಹೈದರಾಬಾದ್‌ನಲ್ಲಿ ಸೋನಾಕ್ಷಿ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈಚೆಗೆ ನೋರಾ ಚಿತ್ರತಂಡ ನಡೆಸುತ್ತಿರುವ ಅಭಿನಯ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದು, ಜನವರಿ 12ರಿಂದ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಸಲ್ಮಾನ್‌ ಖಾನ್‌– ಕತ್ರೀನಾ ಕೈಫ್‌ ಅಭಿನಯದ ‘ಭಾರತ್‌’, ಕಳೆದ ವರ್ಷ ಬಿಡುಗಡೆಯಾದ ಜಾನ್‌ ಅಬ್ರಹಾಂ ಅವರ ‘ಬಟ್ಲಾ ಹೌಸ್‌’, ಈಗ ಶ್ರದ್ಧಾ ಕಪೂರ್‌ ಹಾಗೂ ವರುನ್‌ ಧವನ್‌ ಅಭಿನಯದ ‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಸಿನಿಮಾಗಳಲ್ಲಿ ನೋರಾ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು