ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಕೆಡಿ: ದಿ ಡೆವಿಲ್ ಚಿತ್ರದ ‘ಸರ್ಸೆ ಸರ್ಸೆ ನಿನ್ನಾ ಸೆರಗಾ ಸರ್ಸೆ’ ಹಾಡಿನ ಸಾಹಿತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನೋರಾ ಅವರು ಫತೇಹಿ ಸ್ಪಷ್ಟನೆ ನೀಡಿದ್ದಾರೆ.
.‘ಆಕಾಶ್‘ ಚಿತ್ರದ ನೆನಪುಗಳನ್ನು ಹಂಚಿಕೊಂಡ ರಮ್ಯಾ : ಅಪ್ಪು ಅಭಿಮಾನಿಗಳ ಮೆಚ್ಚುಗೆ.
ಈ ಕುರಿತು ಪೋಸ್ಟ್ ಹಂಚಿಕೊಂಡ ನೋರಾ, ‘ತಪ್ಪು ವಿಷಯಗಳ ಬಗ್ಗೆ ಅಭಿಮಾನಿಗಳು ಧ್ವನಿ ಎತ್ತಿ ಮಾತನಾಡಿರುವುದಕ್ಕೆ ಖುಷಿ ಆಗುತ್ತಿದೆ. ಚಿತ್ರತಂಡವು ಈಗಾಗಲೇ ಈ ಹಾಡನ್ನು ಅಧಿಕೃತವಾಗಿ ಅಳಿಸಿ ಹಾಕಿದೆ. ದಯವಿಟ್ಟು ಆ ಹಾಡನ್ನು ಯಾರೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಡಿ. ಇದರಿಂದ ಆ ಹಾಡಿಗೆ ಸುಮ್ಮನೆ ಪ್ರಚಾರ ನೀಡಿದಂತಾಗುತ್ತದೆ. ಅಲ್ಲದೆ, ಕೆಲವರು ಈ ಹಾಡನ್ನು ನೆಪವಾಗಿ ಇಟ್ಟುಕೊಂಡು ನನ್ನ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಬೇಸರದ ಸಂಗತಿ‘ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡದವರು ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತೇವೆ. ಇನ್ನೊಂದು ವಿಷಯ, ಕೆಡಿ ಚಿತ್ರದ ಹಿಂದಿ ‘ಸರ್ಕೆ ಚುನಾರ್’ ಹಾಡಿಗೆ ನೃತ್ಯ ಮಾಡಿಲ್ಲ. ಹಾಗೆಯೇ ಈ ಹಾಡಿಗೆ ನನ್ನ ಫೋಟೋವನ್ನು ಬಳಸಲು ನಾನು ಅನುಮತಿಯನ್ನೂ ನೀಡಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಧ್ರುವ ಸರ್ಜಾ ನಟನೆಯ ಕೆಡಿ: ದಿ ಡೆವಿಲ್ ಚಿತ್ರದ ‘ಸರ್ಸೆ ಸರ್ಸೆ’ ಹಾಡು ಮಾರ್ಚ್ 14ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳಿಂದ ತೀವ್ರ ಆಕ್ರೋಶವಾವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.