ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್ | ಎನ್‌ಟಿಆರ್‌ಗೆ ವರವಾದ ಲಾಕ್‌ಡೌನ್‌!

Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಟಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುವ ಜ್ಯೂನಿಯರ್‌ ಎನ್‌ಟಿಆರ್‌ ಲಾಕ್‌ಡೌನ್ ಆರಂಭವಾದಾಗಿನಿಂದ ಸಾಮಾಜಿಕ ಮಾಧ್ಯಮಗಳಿಂದ ಕೊಂಚ ದೂರ ಸರಿದಿದ್ದಾರೆ. ಎಲ್ಲಾ ಸ್ಟಾರ್ ನಟರು ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಮಡದಿ, ಮಕ್ಕಳೊಂದಿಗೆ ಸಂತಸದಿಂದ ಸಮಯ ಕಳೆಯುತ್ತಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಎನ್‌ಟಿಆರ್ ಸಾಮಾಜಿಕ ಮಾಧ್ಯಮಗಳಿಂದಲೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಈ ನಟ ಚಾರಿಟಿ ಕೆಲಸವನ್ನೂ ಆರಂಭಿಸಿದ್ದಾರೆ. ಅಲ್ಲದೇ ಆರಂಭದ ದಿನಗಳಲ್ಲಿ ಕೊರೊನಾ ಜಾಗೃತಿ ಕುರಿತಾದ ವಿಡಿಯೊ ಒಂದನ್ನು ರೆಕಾರ್ಡ್ ಮಾಡಿದ್ದರು. ಆ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದರು. ಆದರೆ ಲಾಕ್‌ಡೌನ್‌ ಆರಂಭವಾದಾಗಿನಿಂದ ಯಾವುದೇ ವೈಯಕ್ತಿಕ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಲ್ಲ.

ಈ ನಡುವೆ ಕೆಲ ದಿನಗಳ ಹಿಂದೆ ರಾಜಮೌಳಿ ಅವರು ಮನೆಗೆಲಸದ ವಿಡಿಯೊ ಪೋಸ್ಟ್ ಮಾಡುವಂತೆ ಎನ್‌ಟಿಆರ್‌ಗೆ ಚಾಲೆಂಜ್‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತಾರಕ್ ‘ಖಂಡಿತ ಅಪ್‌ಲೋಡ್ ಮಾಡುವೆ’ ಎಂದು ಪ್ರಾಮಿಸ್ ಮಾಡಿದ್ದರು. ಸೆಲೆಬ್ರಿಟಿ ಪುರುಷರ ಮನೆಗೆಲಸದ ವಿಡಿಯೊ ಪೋಸ್ಟ್ ಮಾಡುವ ಐಡಿಯಾವನ್ನು ಅಭಿವ್ಯಕ್ತಿಗೊಳಿಸಿದ್ದು ಅರ್ಜುನ್ ರೆಡ್ಡಿ ಸಿನಿಮಾದ ನಿರ್ದೇಶಕ ಸಂದೀಪ್ ವಂಗಾ.

ಆದರೆ ಮೂಲಗಳ ಪ್ರಕಾರ ಎನ್‌ಟಿಆರ್ ಈ ಬಿಡುವಿನ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರಂತೆ. ಆರ್‌ಆರ್‌ಆರ್ ಸಿನಿಮಾಕ್ಕಾಗಿ ಹಗಲು–ರಾತ್ರಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಎನ್‌ಟಿಆರ್‌ಗೆ ಈ ಬ್ರೇಕ್‌ ನಿಜಕ್ಕೂ ಅವಶ್ಯವಿತ್ತು. ಆರ್‌ಆರ್‌ಆರ್‌ನಲ್ಲಿ ದೈಹಿಕ ಶ್ರಮಕ್ಕೆ ಒತ್ತು ನೀಡುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ತಾರಕ್‌. ಆ ಕಾರಣಕ್ಕೆ ಈ ನಟ ಲಾಕ್‌ಡೌನ್ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಆರ್‌ಆರ್‌ಆರ್‌ ಸಿನಿಮಾ ಮುಗಿದ ಕೂಡಲೇ ತ್ರಿವಿಕ್ರಮ್‌ ನಿರ್ದೇಶನದ ತಮ್ಮ ಮುಂದಿನ ಚಿತ್ರ ‘ಎನ್‌ಟಿಆರ್‌30’ನ ಕೆಲಸ ಶುರು ಮಾಡಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಮೇ ಅಂತ್ಯಕ್ಕೆ ಅಥವಾ ಜೂನ್‌ ಮೊದಲನೇ ವಾರದಲ್ಲಿ ಆರಂಭವಾಗಬೇಕಿದ್ದು ಲಾಕ್‌ಡೌನ್ ಕಾರಣಕ್ಕೆ ಮುಂದೆ ಹೋಗಲಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT